ದೇಶ ವಿರೋಧಿಗಳನ್ನು ಎನ್ ಕೌಂಟರ್ ಮಾಡಿ : ಶಾಸಕ ಅಭಯ ಪಾಟೀಲ 

khushihost
ದೇಶ ವಿರೋಧಿಗಳನ್ನು ಎನ್ ಕೌಂಟರ್ ಮಾಡಿ : ಶಾಸಕ ಅಭಯ ಪಾಟೀಲ 

ಬೆಳಗಾವಿ : ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರ ಮೇಲೆ ಉತ್ತರ ಪ್ರದೇಶದ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಅವರು, ದೇಶ ವಿರೋಧಿ ಚಟುವಟಿಕೆ ತೊಡಗಿದವರ ಮೇಲೆ ಉಗ್ರ ಕ್ರಮ ಆಗಬೇಕು. ಕೆಲವರು ಪಾಕಿಸ್ತಾನ ಜಿಂದಾಬಾದ್ ಅಂತಿದ್ದಾರೆ. ಇಂತವರ ಮೇಲೆ ಉತ್ತರ ಪ್ರದೇಶದ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇಂತಹ ಕೃತ್ಯಗಳಲ್ಲಿ ತೊಡಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಬೇಕಾದ ವಿಶೇಷ ಕಾನೂನು ರೂಪಿಸಬೇಕು. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವ ಕೆಲಸ ಮಾತ್ರ ಆಗಬಾರದು. ಅಂತಹವರನ್ನು ಎನ್ ಕೌಂಟರ್ ಮಾಡಬೇಕು ಜೊತೆಗೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.

ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವವರಲ್ಲಿ ಅವರದ್ದೇ ಆದ ಅಜೆಂಡಾ ಇರುತ್ತದೆ. ಇವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಾರೆ. ಇಂತವರಿಗೆ ಯಾರು ಆಶ್ರಯ ಕೊಡುತ್ತಾರೋ ಅವರ ಮೇಲೆ ಮೊದಲು ಕ್ರಮ ಆಗಬೇಕು. ರಾಜಕೀಯ ಶಕ್ತಿಗಳೇ ಇಂತವರಿಗೆ ಆಶ್ರಯ ಕೊಡುತ್ತಿರುವುದಾಗಿ ಗಂಭೀರ ಆರೋಪ ಮಾಡಿದರು.

Share This Article