ಬೊಮ್ಮಾಯಿ ಹೇಳಿಕೆ ವಿರುದ್ಧ ಪ್ರತಿಭಟನೆ; ಕರ್ನಾಟಕ ಬಸ್ ಗಳಿಗೆ ಕಪ್ಪು ಮಸಿ ಬಳಿದ ಕಿಡಗೇಡಿಗಳು

khushihost
ಬೊಮ್ಮಾಯಿ ಹೇಳಿಕೆ ವಿರುದ್ಧ ಪ್ರತಿಭಟನೆ; ಕರ್ನಾಟಕ ಬಸ್ ಗಳಿಗೆ ಕಪ್ಪು ಮಸಿ ಬಳಿದ ಕಿಡಗೇಡಿಗಳು

ಪುಣೆ: ಕರ್ನಾಟಕ ಬಸ್‌ ಗಳಿಗೆ ಕಪ್ಪು ಮಸಿ ಬಳಿದು ಮರಾಠ ಮಹಾಸಂಘ ಪುಂಡಾಟ ಮೆರೆದ ಘಟನೆ ಪುಣೆಯಲ್ಲಿ ನಡೆದಿದೆ.

ಪುಣೆ ಜಿಲ್ಲೆಯ ದೌಂಡ್‌ನಲ್ಲಿ ನಿಪ್ಪಾಣಿ-ಔರಂಗಾಬಾದ ಬಸ್‌ಗೆ ಜೈ ಮಹಾರಾಷ್ಟ್ರ ಮತ್ತು ಜಾಹೀತ ನಿಷೇಧ ಪದಗಳನ್ನು ಕಪ್ಪು ಬಣ್ಣದಲ್ಲಿ ಬರೆದು ತಮ್ಮ ಪುಂಡಾಟ ಮೆರೆದಿದ್ದಾರೆ.

ಗಡಿ ವಿವಾದ ಉಲ್ಬಣಗೊಳ್ಳುತ್ತಿದ್ದಂತೆ ಮರಾಠ ಮಹಾಸಂಘವು ನವೆಂಬರ 25 ರಂದು ಪುಣೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ವಿರುದ್ಧವಾಗಿ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆಯ ಸಂಕೇತವಾಗಿ, ಮಹಾಸಂಘ ಪುಂಡರು ಪುಣೆಯಲ್ಲಿ ರಾಜ್ಯ ಮತ್ತು ಕರ್ನಾಟಕದ ನಡುವೆ ಸಂಚರಿಸುವ ಬಸ್ಸುಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದಾರೆ.

ಕಳೆದ ಹಲವು ದಶಕಗಳಿಂದ ಗಡಿ ವಿವಾದದ ವಿಷಯ ಎದ್ದಾಗ ಮಹಾರಾಷ್ಟ್ರದಲ್ಲಿ ಕರ್ನಾಟಕದ ವಾಹನಗಳಿಗೆ ಕಲ್ಲೆಸೆಯುವುದು, ಮಸಿ ಬಳಿಯುವುದು ಆಗಾಗ ನಡೆಯುತ್ತಿರುತ್ತದೆ. ಕಲ್ಲೆಸೆತಕ್ಕೆ ಹೆದರಿ ಬಸ್ ಸಂಚಾರ ಸ್ಥಗಿತಗೊಳ್ಳುವುದು ಮತ್ತು ಅದರಿಂದ ಎರಡೂ ಕಡೆಯ ನಾಗರಿಕರು ತೊಂದರೆ ಅನುಭವಿಸುವುದು ಸಾಮಾನ್ಯ ಎಂಬಂತಿದೆ.

ಮಹಾರಾಷ್ಟ್ರ ದೊಂದಿಗಿನ ಗಡಿ ವಿವಾದದ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ನೀಡಿದ್ದ ಹೇಳಿಕೆ ವಿರೋಧಿಸಿ ಮರಾಠಾ ಮಹಾಸಂಘದ ಸದಸ್ಯರು ಗುರುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ ಮೇಲೆ “ನಿಷೇದಾರ್ಥ” ಬರಹ ಬರೆದಿದ್ದಾರೆ.

ಪುಣೆ ಜಿಲ್ಲೆಯ ದೌಂಡ್‌ನಲ್ಲಿ ನಿಪ್ಪಾಣಿ-ಔರಂಗಾಬಾದ್ ಬಸ್‌ನ ಎರಡೂ  ಕಡೆಗಳಲ್ಲಿ “ಜೈ ಮಹಾರಾಷ್ಟ್ರ” ಮತ್ತು “ಜಾಹೀರ ನಿಷೇಧ‌” (ಖಂಡನೆ) ಎಂಬ ಪದಗಳನ್ನು ಮರಾಠಿಯಲ್ಲಿ ಕೇಸರಿ ಮತ್ತು ಕಪ್ಪು ಬಣ್ಣದಲ್ಲಿ ಬರೆಯಲಾಗಿದ್ದು ಕರ್ನಾಟಕದ ಮುಖ್ಯಮಂತ್ರಿ ವಿರುದ್ಧವೂ ಘೋಷಣೆ ಕೂಗಿದರು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಕೆಲವು ಗ್ರಾಮ ಪಂಚಾಯತಿಗಳು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವಾಗ ಕರ್ನಾಟಕದೊಂದಿಗೆ ವಿಲೀನಗೊಳಿಸಲು ಈ ಹಿಂದೆ ನಿರ್ಣಯವನ್ನು ಅಂಗೀಕರಿಸಿದ್ದವು ಎಂದು ಬೊಮ್ಮಾಯಿ ಮಂಗಳವಾರ ಪ್ರತಿಪಾದಿಸಿದ್ದರು.

ಈ ಹೇಳಿಕೆಯು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಅವರು, ಇದು 2012 ರಲ್ಲಿ ಮಾಡಿದ ಬೇಡಿಕೆಯಾಗಿದ್ದು ಈಗ ಯಾವುದೇ ಪ್ರಸ್ತುತತೆ ಹೊಂದಿಲ್ಲ ಎಂದು ಟೀಕಿಸಿದ್ದರು. “ಮಹಾರಾಷ್ಟ್ರದ ಒಂದು ಹಳ್ಳಿಯೂ ಎಲ್ಲಿಯೂ ಹೋಗುವುದಿಲ್ಲ” ಎಂದು ಅವರು ಹೇಳಿದರು. ಈಗ ಈ ಬೆಳವಣಿಗೆ ನಡೆದಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಕುರಿತ ವಾಕ್ಸಮರ ಜೋರಾಗುತ್ತಿದ್ದಂತೆಯೇ ಮರಾಠಾ ಮಹಾಸಂಘವು ಗುರುವಾರ ರಂದು ಪುಣೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ವಿರುದ್ಧವಾಗಿ ಪ್ರತಿಭಟನೆ ನಡೆಸಿತು.

Share This Article