ಎಸ್ ಡಿ ಎ ಹುದ್ದೆ ಆಕಾಂಕ್ಷಿಗಳಿಗೆ ಮಹತ್ವದ ಮಾಹಿತಿ

khushihost
ಎಸ್ ಡಿ ಎ ಹುದ್ದೆ ಆಕಾಂಕ್ಷಿಗಳಿಗೆ ಮಹತ್ವದ ಮಾಹಿತಿ

ಬೆಂಗಳೂರು, ೩೬- ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಮಾಹಿತಿ ಇಲ್ಲಿದೆ.

1323 ಹುದ್ದೆಗಳ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗ ಶುಕ್ರವಾರದಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಆಯೋಗದ ವೆಬ್ ಸೈಟ್ ನಲ್ಲಿ ಇದು ಲಭ್ಯವಿದೆ.

ಹೈದರಾಬಾದ್ ಕರ್ನಾಟಕ ಮತ್ತು ಇತರೆ ಕರ್ನಾಟಕ ಪ್ರದೇಶಕ್ಕೆ ಸೇರಿದವರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ.

ಅಲ್ಲದೆ ಉಳಿಕೆ ಮೂಲ ವೃಂದ ಮತ್ತು ಹೈದರಾಬಾದ ಕರ್ನಾಟಕ ವೃಂದದ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಯಾವುದಾದರೂ ಒಂದು ಹುದ್ದೆಯನ್ನು ತ್ಯಜಿಸಲು ಬಯಸಿದರೆ ಆನ್ ಲೈನ್ ಮೂಲಕ ಮನವಿ ಸಲ್ಲಿಸಲು ತಿಳಿಸಲಾಗಿದೆ.

Share This Article