ಬೈಕ್ ಸವಾರನಿಗೆ 17,500 ಸಾವಿರ ರೂ. ದಂಡ 

khushihost
ಬೈಕ್ ಸವಾರನಿಗೆ 17,500 ಸಾವಿರ ರೂ. ದಂಡ 

ಹುಬ್ಬಳ್ಳಿ : ಬೈಕ್ ಸವಾರನಿಗೆ ಬರೋಬ್ಬರಿ 17, 500 ರೂಪಾಯಿ ದಂಡ ಬಿದ್ದಿದ್ದು, ದಂಡಕ್ಕೆ ಬೆಚ್ಚಿದ ಸವಾರ, ಬೈಕ್​ನನ್ನು ಸಂಚಾರಿ ಪೊಲೀಸರಿಗೆ ಒಪ್ಪಿಸಿ ಹೋದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

23 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಬೈಕ್‌ ಸವಾರನಿಗೆ 17,500 ಸಾವಿರ ದಂಡ ಪಾವತಿಸುವಂತೆ ಸೂಚನೆ ನೀಡಲಾಗಿದೆ.

ಉತ್ತರ ಸಂಚಾರ ಠಾಣೆ ಪೊಲೀಸರಿಂದ ಬೈಕ್ ಸವಾರನಿಗೆ ದಂಡ ಕಟ್ಟುವಂತೆ ಸೂಚಿಸಲಾಗಿದೆ. ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸಿ, ಭಾರಿ ದಂಡ ಹಾಕಿಸಿಕೊಂಡ ವ್ಯಕ್ತಿಯನ್ನು ಹುಬ್ಬಳ್ಳಿಯ ಮಹ್ಮದ‌ ರಫೀಕ‌ ಗುಡಗೇರಿ ಎಂದು ಹೇಳಲಾಗಿದೆ.

ಹಣ ಈಗಲೇ ಪಾವತಿಸಲು ಸಾಧ್ಯವಿಲ್ಲ ಎಂದು ಬೈಕ್‌ ಚಾವಿ ಕೊಟ್ಟು ರಫೀಕ ಹೊರಟು ಹೋಗಿದ್ದಾನೆ. ಸದ್ಯ ರಫೀಕ ಬೈಕ್ ನ್ನು ಸಂಚಾರಿ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ.

Share This Article