ಕಿತವಾಡ ಫಾಲ್ಸನಲ್ಲಿ ಜಾರಿ ಬಿದ್ದು ನಾಲ್ವರು ಯುವತಿಯರ ದುರ್ಮರಣ

khushihost
ಕಿತವಾಡ ಫಾಲ್ಸನಲ್ಲಿ ಜಾರಿ ಬಿದ್ದು ನಾಲ್ವರು ಯುವತಿಯರ ದುರ್ಮರಣ

ಬೆಳಗಾವಿ : ಕರ್ನಾಟಕ – ಮಹಾರಾಷ್ಟ್ರ ಗಡಿಭಾಗದಲ್ಲಿರುವ ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಬೆಳಗಾವಿ ಮೂಲದ ನಾಲ್ವರು ಯುವತಿಯರು ಮೃತಪಟ್ಟ ದುರ್ಘಟನೆ ಸಂಭವಿಸಿದೆ.

ಬೆಳಗಾವಿಯಿಂದ 40 ಯುವತಿಯರು ಟ್ರಿಪ್‌ಗೆ ತೆರಳಿದ್ದರು. ಅನಗೋಳದ ಕುದಶಿಯಾ ಹಾಸಂ ಪಟೇಲ (20), ಉಜ್ವಲ ನಗರ ಆಸೀಯಾ ಮುಜಾವರ (17), ಝಟಪಟ್ ಕಾಲೋನಿಯ ರುಕಸಾರ್ ಭಿಸ್ತಿ (20) ಮತ್ತು ತಸ್ಮಿಯಾ (20) ಮೃತಪಟ್ಟ ಯುವತಿಯರಾಗಿದ್ದಾರೆ.

ಕಿತವಾಡ ಫಾಲ್ಸ‌ಗೆ ಬೆಳಗಾವಿಯಿಂದ 40 ಯುವತಿಯರು ಟ್ರಿಪ್‌ಗೆ ತೆರಳಿದ್ದರು. ಸೆಲ್ಫಿ ತಗೆದುಕೊಳ್ಳುವ ವೇಳೆ ಯುವತಿಯರು ಕಾಲು ಜಾರಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಬಿಮ್ಸನಲ್ಲಿ ಶವಗಳನ್ನು ತಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share This Article