ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟ; ಬಸ್ ಸಂಚಾರ ಸ್ಥಗಿತ 

khushihost
ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟ; ಬಸ್ ಸಂಚಾರ ಸ್ಥಗಿತ 

ಪುಣೆ : ಗಡಿ ವಿವಾದದ ಬೆನ್ನಲ್ಲೇ ಮಹಾರಾಷ್ಟ್ರದ ಕ್ಯಾತೆ ಮುಂದುವರೆದಿದ್ದು, ಕರ್ನಾಟಕದ ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಟಾಟ ಮೆರೆದಿದ್ದಾರೆ.

ಈಗ ಮೀರಜ ಮಾರ್ಗವಾಗಿ ಸಂಚರಿಸುವ ಎಲ್ಲಾ 150 ಬಸ್ ಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಬಸ್ ಸೇವೆ ಸ್ಥಗಿತವಾಗಿದ್ದು, ಕಾಗವಾಡ ಗಡಿ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ.

ಮಹಾರಾಷ್ಟ್ರದ ಪುಣೆಯಿಂದ ಅಥಣಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮೇಲೆ ಮಿರಜ-ಕಾಗವಾಡ ಮಾರ್ಗಮಧ್ಯೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದಾರೆ.

Share This Article