ಅಂಬೇಡ್ಕರ ಬಗ್ಗೆ ಪ್ರಧಾನಿ, ಆರ್ ಎಸ್‌ಎಸ್ ಮೊಸಳೆ ಕಣ್ಣೀರು : ಸಿದ್ದರಾಮಯ್ಯ 

khushihost
ಅಂಬೇಡ್ಕರ ಬಗ್ಗೆ ಪ್ರಧಾನಿ, ಆರ್ ಎಸ್‌ಎಸ್ ಮೊಸಳೆ ಕಣ್ಣೀರು : ಸಿದ್ದರಾಮಯ್ಯ 

ಬೆಂಗಳೂರು : ಡಾ.ಬಿ.ಆರ್. ಅಂಬೇಡ್ಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಆರ್ ಎಸ್‌ಎಸ್ ಜನ ಮೊಸಳೆ ಕಣ್ಣೀರು ಹಾಕ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಅವರು ಸಂವಿಧಾನ ಬದಲಾವಣೆ ಮಾಡ್ತೀವಿ ಅಂದಿದ್ದರು. ಮೋದಿ, ಅಮಿತ ಶಾ ಒಪ್ಪಿಗೆಯಿಂದ ಇಂತಹ ಹೇಳಿಕೆ ಕೊಟ್ಟಿದ್ದರು. ಇವರು ನೆಹರೂ ವಿರೋಧ ಮಾಡಲು ಅಂಬೇಡ್ಕರ ಪರ ಮಾತನಾಡುತ್ತಿದ್ದಾರೆ ಎಂದರು.

ಸಂಘ ಪರಿವಾರದ ಒಬ್ಬರಾದರೂ ದೇಶಕ್ಕೆ ಪ್ರಾಣತ್ಯಾಗ ಮಾಡಿದ್ದಾರಾ.. ಬಿಜೆಪಿಯವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು. ಅಂಬೇಡ್ಕರ ಬಗ್ಗೆ ಪ್ರಧಾನಿ ಮೋದಿ, ಆರ್ ಎಸ್ ಎಸ್ ನವರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article