ರಟ್ಟಿನ ಬಾಕ್ಸದಲ್ಲಿ 3 ದಿನಗಳ ಮಗು ಪತ್ತೆ

khushihost
ರಟ್ಟಿನ ಬಾಕ್ಸದಲ್ಲಿ 3 ದಿನಗಳ ಮಗು ಪತ್ತೆ

ಗದಗ: ರಟ್ಟಿನ ಬಾಕ್ಸದಲ್ಲಿ 3 ದಿನಗಳ ಹಸುಳೆ ಪತ್ತೆಯಾದ ಅಮಾನವೀಯ ಘಟನೆ ನಗರದ ಎಪಿಎಂಸಿ ಆವರಣದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಗದಗ ಎಪಿಎಂಸಿ ಆವರಣದ ನಿರ್ಜನ ಪ್ರದೇಶದಲ್ಲಿ ಬೇವಿನ ಸೊಪ್ಪು, ಕೊಂಬೆಗಳನ್ನು ಸೇರಿಸಿ ಅದರ ಅಡಿಯಲ್ಲಿ ರಟ್ಟಿನ ಡಬ್ಬಿಯಲ್ಲಿ ಮಗುವನ್ನು ಮುಚ್ಚಿಡಲಾಗಿತ್ತು.

ಮಗು ಅಳುವುದು ಕೇಳಿಸಿಕೊಂಡ ಆಕಾಶ‌ ಎಂಬ ಯುವಕ ತಕ್ಷಣ ಪೊಲೀಸ್ ಠಾಣೆಗೆ ಕರೆ ಮಾಡಿದರು. ಬಡಾವಣೆಯ ಪೊಲೀಸ್ ಕಾನಸ್ಟೇಬಲ್​ಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು.

ಮಗುವಿನ ಪೋಷಕರನ್ನು ಪತ್ತೆ ಮಾಡಲು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಸುಗೂಸನ್ನು ರಟ್ಟಿನ ಡಬ್ಬಿಯಲ್ಲಿ ಎಸೆದು‌ ಹೋದ ಪಾಪಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Share This Article