ಮದುವೆಯಾದ 22 ದಿನಕ್ಕೆ ಯುವ ಪತ್ರಕರ್ತ ದಂಪತಿ ಆತ್ಮಹತ್ಯೆ

khushihost
ಮದುವೆಯಾದ 22 ದಿನಕ್ಕೆ ಯುವ ಪತ್ರಕರ್ತ ದಂಪತಿ ಆತ್ಮಹತ್ಯೆ

ವಿಜಯಪುರ : ಯುವ ಪತ್ರಕರ್ತ ಹಾಗೂ ಆತನ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

ಎಪಿಎಂಸಿ ಪಕ್ಕದ ಮುಖ್ಯ ರಸ್ತೆಯಲ್ಲಿರುವ ಮುರಾಳ ಅವರ ಕಟ್ಟಡದಲ್ಲಿ ಯುವ ಪತ್ರಕರ್ತ ದಂಪತಿ ವಾಸವಾಗಿದ್ದರು.

ತಿಪ್ಪಣ್ಣ ಹೊಸಮನಿ (34) ಮತ್ತು ಆತನ ಪತ್ನಿ ಸುಶೀಲಾಬಾಯಿ (30) ಎಂದು ಗುರುತಿಸಲಾಗಿದೆ. ತಿಪ್ಪಣ್ಣ ಖಾಸಗಿ ಮಾಧ್ಯಮವೊಂದರಲ್ಲಿ ಕ್ಯಾಮರಾಮನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ನವೆಂಬರ 5 ರಂದು ತಿಪ್ಪಣ್ಣ ಮತ್ತು ಸುಶೀಲಾಬಾಯಿ ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು ಎನ್ನಲಾಗಿದೆ.

ಪತಿ‌ – ಪತ್ನಿ ಇಬ್ಬರೂ ಅನೋನ್ಯವಾಗಿಯೇ ಸಂಸಾರ ನಡೆಸುತ್ತಿದ್ದರು. ಏಕಾಏಕಿ ನೇಣಿಗೆ ಶರಣಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಆರೀಫ ಮುಶಾಪುರಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article