60 ಲಕ್ಷ ಭಾರತೀಯರು ಸೇರಿದಂತೆ 50 ಕೋಟಿ ಮಂದಿಯ ವಾಟ್ಸಪ್ ಡೇಟಾ ಮಾರಾಟಕ್ಕೆ

khushihost
60 ಲಕ್ಷ ಭಾರತೀಯರು ಸೇರಿದಂತೆ 50 ಕೋಟಿ ಮಂದಿಯ ವಾಟ್ಸಪ್ ಡೇಟಾ ಮಾರಾಟಕ್ಕೆ

ಹೊಸದಿಲ್ಲಿ, ೨೮- ಸಾಮಾಜಿಕ ಜಾಲತಾಣಗಳು ಇಂದು ಜನ ಜೀವನದ ಅವಿಭಾಜ್ಯ ಅಂಗವಾಗಿವೆ. ಅದರಲ್ಲೂ ವಾಟ್ಸಾಪ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದು ಪ್ರಭಾವಿ ಮಾಧ್ಯಮವಾಗಿದೆ. 60 ಲಕ್ಷ ಭಾರತೀಯರು ಸೇರಿದಂತೆ ವಿಶ್ವದ 50 ಕೋಟಿ ಮಂದಿಯ ವೈಯಕ್ತಿಕ ಡೇಟಾವನ್ನು ಹ್ಯಾಕ್ ಮಾಡಲಾಗಿದ್ದು, ಇದನ್ನು ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡಲು ಹ್ಯಾಕರ್ ಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಸೋರಿಕೆಯಾಗಿರುವ ವೈಯಕ್ತಿಕ ಡೇಟಾಗಳ ಪೈಕಿ ಅತಿ ಹೆಚ್ಚು ಎಂದರೆ 4.5 ಕೋಟಿ ಮಂದಿಯ ಡೇಟಾ ಈಜಿಪ್ಟ ಬಳಕೆದಾರರಾಗಿದ್ದರೆ, ಇಟಲಿಯ 3.5 ಕೋಟಿ ಹಾಗೂ ಅಮೆರಿಕಾದ 3.2 ಕೋಟಿ ಬಳಕೆದಾರರ ಡೇಟಾ ಹ್ಯಾಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Share This Article