ಸಿದ್ದರಾಮಯ್ಯಗೆ ಪ್ರಿಯವಾದುದನ್ನೇ ಹೇಳಿದ್ದೇನೆ; ಸಿ.ಟಿ.ರವಿ ಸಮರ್ಥನೆ

khushihost
ಸಿದ್ದರಾಮಯ್ಯಗೆ ಪ್ರಿಯವಾದುದನ್ನೇ ಹೇಳಿದ್ದೇನೆ; ಸಿ.ಟಿ.ರವಿ ಸಮರ್ಥನೆ

ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಿವಾಸಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಸದ್ಭಾವನೆಯಿಂದ ಬರುವುದಾದರೆ ಬರಲಿ ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಕಾರ್ಯಕರ್ತರು ಸದ್ಭಾವನೆಯಿಂದ ಬಂದರೆ ಅತಿಥಿಗಳು ಎಂದು ನಾವು ಭಾವಿಸುತ್ತೇವೆ. ಅತಿಥಿಗಳನ್ನು ದೇವರು ಎಂದು ಆದರಿಸುತ್ತೇವೆ. ಆದರೆ ದರ್ಪದಿಂದ ಬಂದರೆ ಅದೇ ಭಾವನೆಯಿಂದಲೇ ಪ್ರತಿಕ್ರಿಯಿಸುತ್ತೇವೆ ಎಂದಿದ್ದಾರೆ.

ಸಿದ್ರಾಮುಲ್ಲಾಖಾನ ಎಂದು ಸಿದ್ದರಾಮಯ್ಯನವರಿಗೆ ನಾನಷ್ಟೇ ಹೇಳಿಲ್ಲ. ಈ ಹಿಂದೆ ಕೆ.ಎಸ್.ಈಶ್ವರಪ್ಪ ಕೂಡ ಹೇಳಿದ್ದರು. ಇಷ್ಟಕ್ಕೂ ಸಿದ್ದರಾಮಯ್ಯನವರಿಗೆ ಪ್ರಿಯವಾದುದನ್ನೇ ಹೇಳಿದ್ದೇನೆ. ಅವರಿಗೆ ಟಿಪ್ಪು ಸುಲ್ತಾನ, ಟಿಪ್ಪು ಟೋಪಿ ಪ್ರಿಯವಾದುದಲ್ಲವೇ? ಅದಕ್ಕೆ ಹಾಗೆ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

Share This Article