ಕರವೇ ಕಾರ್ಯಕರ್ತರ ತಡೆಗೆ ಹೆದ್ದಾರಿಯಲ್ಲಿ ಪೊಲೀಸ್ ಸರ್ಪಗಾವಲು; ಹಲವರು ಪೊಲೀಸ ವಶಕ್ಕೆ

khushihost
ಕರವೇ ಕಾರ್ಯಕರ್ತರ ತಡೆಗೆ ಹೆದ್ದಾರಿಯಲ್ಲಿ ಪೊಲೀಸ್ ಸರ್ಪಗಾವಲು; ಹಲವರು ಪೊಲೀಸ ವಶಕ್ಕೆ

ಬೆಳಗಾವಿ : ರಾಜ್ಯ ಪ್ರವೇಶಕ್ಕೆ ಮಹಾರಾಷ್ಟ್ರ ಸಚಿವರಿಗೆ ಸರಕಾರ ನಿಷೇಧ ವಿಧಿಸಿದ್ದು ಅದರಂತೆ  ಪರ ಸ್ಥಳಗಳಿಂದ ಬೆಳಗಾವಿಗೆ ಆಗಮಿಸುತ್ತಿರುವ ಕನ್ನಡ ಕಾರ್ಯಕರ್ತರನ್ನು ಸಹ ವಶಕ್ಕೆ ಪಡೆಯುತ್ತಿದ್ದಾರೆ. ಈಗಾಗಲೇ ಸುಮಾರು 20 ಕರವೇ ಕಾರ್ಯಕರ್ತರನ್ನು ಹಿರೇಬಾಗೇವಾಡಿ ಟೋಲ್ ಪ್ಲಾಝಾ ಬಳಿ ವಶಕ್ಕೆ ಪಡೆಯಲಾಗಿದೆ.

ರಾಜ್ಯ ಸರಕಾರದ ಮರಾಠಿ ಓಲೈಕೆ, ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಯ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಪೊಲೀಸ್ ಅಧಿಕಾರಿಗಳ ಕುರಿತು ಇನ್ನೂ ಕ್ರಮ ಜರುಗಿಸದೇ ಇರುವ ಕುರಿತು ನಾರಾಯಣಗೌಡ ನೇತೃತ್ವಡ ಕರ್ನಾಟಕ ರಕ್ಷಣಾ ವೇದಿಕೆ ಇಂದು 12 ಗಂಟೆಗೆ ಬೆಳಗಾವಿ ರಾಣಿ ಚನ್ನಮ್ಮ ವೃತ್ತದಲ್ಲಿ ಸಭೆ ಆಯೋಜನೆ ಮಾಡಿದೆ. ಇದರಲ್ಲಿ ಪಾಲ್ಗೊಳ್ಳಲು ಇತರ ಭಾಗಗಳಿಂದ ಕನ್ನಡ ಕಾರ್ಯಕರ್ತರು ಆಗಮಿಸುತ್ತಿದ್ದು ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ಅವರ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ.

ಈಗಾಗಲೇ ಹಿರೇಬಾಗೇವಾಡಿ ಟೋಲ್ ಪ್ಲಾಝಾ ಬಳಿ 7 ಕೆಎಸ್ ಆರ್ ಪಿ ದಳ, 6 ಕೆಎಸ್ ಆರ್ ಟಿಸಿ ಬಸ್ ನಿಯೋಜಿಸಲಾಗಿದೆ. ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ಬರಲಿರುವ ನಾರಾಯಣಗೌಡರನ್ನೂ ವಶಕ್ಕೆ ಪಡೆದು ಹಿಂದಕ್ಕೆ ಕಳುಹಿಸುವ ಸಾಧ್ಯತೆಯಿದೆ.

Share This Article