ಬಿಜೆಪಿ ಕಚೇರಿಯಿಂದ ʼಮೋದಿ ಮೋದಿʼ ಘೋಷಣೆ ಕೂಗುತ್ತಿದ್ದವರಿಗೆ ರಾಹುಲ್‌ ಗಾಂಧಿ ಫ್ಲೈಯಿಂಗ್‌ ಕಿಸ್…!

khushihost
ಬಿಜೆಪಿ ಕಚೇರಿಯಿಂದ ʼಮೋದಿ ಮೋದಿʼ ಘೋಷಣೆ ಕೂಗುತ್ತಿದ್ದವರಿಗೆ ರಾಹುಲ್‌ ಗಾಂಧಿ ಫ್ಲೈಯಿಂಗ್‌ ಕಿಸ್…!

ಜೈಪುರ, ೬- ಪ್ರಸ್ತುತ ರಾಜಸ್ಥಾನದಲ್ಲಿ ಭಾರತ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಕಚೇರಿ ಮೇಲಿಂದ ಕಾರ್ಯಕರ್ತರು ಮೋದಿ, ಮೋದಿ ಎಂಬ ಘೋಷಣೆಗಳನ್ನು ಕೂಗಿದಾಗ ಫ್ಲೈಯಿಂಗ್ ಕಿಸ್ ನೀಡಿ ಉತ್ತರಿಸುವ ಮೂಲಕ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿದರು.

ಮಂಗಳವಾರ ಬೆಳಿಗ್ಗೆ ರಾಹುಲ್ ಗಾಂಧಿ ತಮ್ಮ ಯಾತ್ರೆಯನ್ನು ಆರಂಭಿಸಿ ಜಲಾವರ್ ನ ಬಿಜೆಪಿ ಕಚೇರಿಯ ಮುಂಭಾಗ ಸಾಗುತ್ತಿದ್ದರು. ಆಗ ಬಿಜೆಪಿ ಕಚೇರಿಯ ಮೇಲ್ಛಾವಣಿಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು “ಮೋದಿ ಮೋದಿ” ಎಂದು ಜೋರಾಗಿ ಘೋಷಣೆ ಕೂಗಿದರು.

ಈ ವೇಳೆ ಘೋಷಣೆ ಕೂಗುತ್ತಿದ್ದವರತ್ತ ರಾಹುಲ್ ಗಾಂಧಿ ಅವರು ಫ್ಲೈಯಿಂಗ್ ಕಿಸ್ ನೀಡಿ ನಗುತ್ತಾ ಇನ್ನೂ ಕೂಗಿ ಎಂಬಂತೆ ಸನ್ನೆ ಮಾಡಿ ಮುಂದೆ ಸಾಗಿದರು. ಈ ವಿಡಿಯೋವನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

Share This Article