ದಾಖಲೆ ಸಲ್ಲಿಸುವುದನ್ನು ಮರೆತ ವಿದ್ಯಾರ್ಥಿನಿ; ಮೆಡಿಕಲ್ ಸೀಟ್ ಕೈ ತಪ್ಪುವ ಭೀತಿಯಿಂದ ಆತ್ಮಹತ್ಯೆ

khushihost
ದಾಖಲೆ ಸಲ್ಲಿಸುವುದನ್ನು ಮರೆತ ವಿದ್ಯಾರ್ಥಿನಿ; ಮೆಡಿಕಲ್ ಸೀಟ್ ಕೈ ತಪ್ಪುವ ಭೀತಿಯಿಂದ ಆತ್ಮಹತ್ಯೆ

ಬಾಗಲಕೋಟ: ಬಾಗಲಕೋಟ ನಗರದ ವಿದ್ಯಾಗಿರಿ ನಿವಾಸಿಯಾಗಿರುವ ವಿದ್ಯಾರ್ಥಿನಿಯೊಬ್ಬಳು ದಾಖಲೆ ಸಲ್ಲಿಸದ ಕಾರಣ ಮೆಡಿಕಲ್ ಕೋರ್ಸ್ ಗೆ ಪ್ರವೇಶ ಸಿಗುವುದಿಲ್ಲ ಎಂದು ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

20 ವರ್ಷದ ನಿತ್ಯಾ ಬಿದರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಪ್ರವೇಶಕ್ಕೆ ಅರ್ಹತೆ ಗಳಿಸಿದ ನಿತ್ಯಾ ಕಾಲೇಜಿಗೆ ಸಲ್ಲಿಸಬೇಕಾದ ದಾಖಲೆಗಳ ಪೈಕಿ ಒಂದು ದಾಖಲೆ ಸಲ್ಲಿಸುವುದನ್ನು ಮರೆತಿದ್ದಳು.

ಪರಿಶೀಲನೆ ಮಾಡಿದಾಗ ದಾಖಲೆ ಸಲ್ಲಿಸುವ ಅವಧಿ ಮುಕ್ತಾಯಗೊಂಡಿತ್ತು. ಇದರಿಂದಾಗಿ ಖಿನ್ನತೆಗೆ ಒಳಗಾದ ನಿತ್ಯಾ ಮೆಡಿಕಲ್ ಸೀಟ್ ಸಿಗುವುದಿಲ್ಲ ಎಂದು ಭಾವಿಸಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ.

ದುಡುಕಿನ ನಿರ್ಧಾರ ಕೈಗೊಂಡು ನೇಣು ಹಾಕಿಕೊಂಡಿದ್ದ ನಿತ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ನಂತರ ಆಕೆ ಮೃತಪಟ್ಟಿದ್ದಾರೆ. ಬಾಗಲಕೋಟ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article