ಲಾಡ್ಜನಲ್ಲಿ ದುಡುಕಿನ ನಿರ್ಧಾರ; ಆತ್ಮಹತ್ಯೆಗೆ ಸಂಬಂಧಿಕ ಯುವಕ-ಯುವತಿ

khushihost
ಲಾಡ್ಜನಲ್ಲಿ ದುಡುಕಿನ ನಿರ್ಧಾರ; ಆತ್ಮಹತ್ಯೆಗೆ ಸಂಬಂಧಿಕ ಯುವಕ-ಯುವತಿ

ನವಲಗುಂದ: ಧಾರವಾಡ ಜಿಲ್ಲೆಯ ನವಲಗುಂದದ ಲಾಡ್ಜ ಒಂದರಲ್ಲಿ ಸಂಬಂಧಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಪ್ರೀತಿ ಬೆಳೆದಿದ್ದು, ಬಿಟ್ಟಿರಲಾರದೇ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಅಕ್ಕ, ತಂಗಿಯರ ಮಕ್ಕಳು ಇವರಾಗಿದ್ದು, ಚಿಕ್ಕಮ್ಮನ ಮಗಳನ್ನು ಪ್ರೀತಿಸಿದ್ದ 22 ವರ್ಷದ ಯುವಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪಿಯುಸಿ ಓದುತ್ತಿದ್ದ ತಂಗಿಯನ್ನೇ ಪ್ರೀತಿಸುತ್ತಿದ್ದ. ಪ್ರೇಮ ಪಾಶದಲ್ಲಿ ಸಿಲುಕಿದ್ದ ಇವರು ಹೇಳಿಕೊಳ್ಳಲಾಗದೇ, ಬಿಟ್ಟಿರಲಾರದೇ ಸಾವಿನ ಮನೆ ಸೇರಿದ್ದಾರೆ.

ಬೆಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಯುವಕ ಮನೆಯಲ್ಲಿ ಹೇಳಿ ಹೋಗಿದ್ದು, ಕಾಲೇಜಿಗೆ ಹೋಗಿ ಬರುವುದಾಗಿ ಯುವತಿ ತೆರಳಿದ್ದಾಳೆ. ನಂತರ ಇಬ್ಬರು ನಾಪತ್ತೆಯಾಗಿದ್ದು, ನವಲಗುಂದದ ಲಾಡ್ಜ್ ನಲ್ಲಿ ಒಂದೇ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತ್ಯ ತಿಳಿದು ಸಂಬಂಧಿಕರಿಗೆ ಶಾಕ್ ಆಗಿದೆ. ನವಲಗುಂದ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Share This Article