ಬರ್ಬರವಾಗಿ ಕೊಲೆಯಾದ ರಿಯಲ್ ಎಸ್ಟೇಟ ಎಜೆಂಟ

khushihost
ಬರ್ಬರವಾಗಿ ಕೊಲೆಯಾದ ರಿಯಲ್ ಎಸ್ಟೇಟ ಎಜೆಂಟ

ಬೆಳಗಾವಿ: ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಕ್ಯಾಂಪ್​ ಪ್ರದೇಶದಲ್ಲಿ ನಡೆದಿದೆ.

ಸುಧೀರ ಕಾಂಬಳೆ(57) ಕೊಲೆಯಾದ ದುರ್ದೈವಿ. ದುಬೈನಲ್ಲಿ ವಾಸ ಮಾಡುತ್ತಿದ್ದ ಸುಧೀರ ಕಾಂಬಳೆ ಅವರು ಕೊರೊನಾ ಕಾರಣ ಎರಡು ವರ್ಷಗಳ ಹಿಂದೆ ಬೆಳಗಾವಿಗೆ ಬಂದು ರಿಯಲ್ ಎಸ್ಟೇಟ್  ಎಜೆಂಟರಾಗಿ ಕೆಲಸ ಮಾಡುತ್ತಿದ್ದರು.

ಕ್ಯಾಂಪ್ ಪ್ರದೇಶದ ತಮ್ಮ ಮನೆಯಲ್ಲಿ ಮಧ್ಯಾಹ್ನ ಮಲಗಿದ್ದಾಗ ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article