ಕತ್ತಿ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದ ಕಾರು ಅಪಘಾತ 

khushihost
ಕತ್ತಿ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದ ಕಾರು ಅಪಘಾತ 

ಹುಕ್ಕೇರಿ : ಸಚಿವ ಉಮೇಶ ಕತ್ತಿ ನಿಧನದಿಂದ ಅಘಾತಗೊಂಡಿರುವ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದ್ದ ಕಾರಿಗೆ ಎದುರಿಗೆ ಬಂದ ಕಾರೊಂದಕ್ಕೆ ಢಿಕ್ಕಿ ಹೊಡೆದು ಅದೃಷ್ಟವಷಾತ್ ಕಂದಕದಲ್ಲಿ ಬೀಳದೇ ರಸ್ತೆ ಬದಿಯ ಸುರಕ್ಷತಾ ಕಟ್ಟೆಗೆ ಢಿಕ್ಕಿ ಹೊಡೆದು ನಿಂತಿತು. ಘಟನೆ ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.

ಕತ್ತಿ ಕುಟುಂಬದವರಿಗೆ ಸಾಂತ್ವನ ಹೇಳಲು ಉಪ್ಪಾರ ಸಮಾಜದ ಹಿರಿಯ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಕಲ್ಲಪ್ಪ ಚೌಕಶಿ, ಗೋಕಾಕ ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ನಿಂಗಪ್ಪ ಮಾಳ್ಯಾಗೋಳ ಮತ್ತು ಸುನಿಲ ಕಾರಿನಲ್ಲಿ ಹೊರಟಿದ್ದಾಗ ಬೆಲ್ಲದ ಬಾಗೇವಾಡಿ ಸಮಿಪದ ಕೊರವಂಜಿ ನಗರದ ಬಳಿ ಮಹಿಂದ್ರಾ ಸ್ಕಾರ್ಪಿಯೋ ಕಾರ್ ಡಿಕ್ಕಿ ಹೊಡೆಸಿ ಚಾಲಕ ಪರಾರಿಯಾಗಿದ್ದಾನೆ.

ಅಪಘಾತ ಸಂಭವಿಸಿದ ಸ್ಥಳದ ಬದಿ ನೀರಾವರಿ ಇಲಾಖೆಯ 30 ಅಡಿ ಆಳದ ಕಾಲುವೆಯಿದೆ. ರಸ್ತೆ ಬದಿಯ ಸುರಕ್ಷತಾ ಕಟ್ಟೆ ಇಲ್ಲದಿದ್ದರೆ ದೊಡ್ಡ ಅನಾಹುತವಾಗುವ ಸಾಧ್ಯತೆಯಿತ್ತು.

ಕಾರಿನಲ್ಲಿದ್ದವರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮಿಪದ ಘಟಪ್ರಭಾ ಕೆಎಚ್ಐ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Share This Article