ದಾಂಡೇಲಿಯಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ

khushihost
ದಾಂಡೇಲಿಯಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ

ದಾಂಡೇಲಿ: ನದಿಯಲ್ಲಿ ಈಜಲು ಹೋದವನನ್ನು ಮೊಸಳೆಗಳು ಎಳೆದೊಯ್ದ ಮತ್ತೊಂದು ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಜನರು ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ನಡೆದಿದೆ.

ಕಾಳಿ ನದಿಯಲ್ಲಿ ಈಜಲು ತೆರಳಿದ್ದ ಅಪರಿಚಿತ ವ್ಯಕ್ತಿಯನ್ನು ಮೊಸಳೆ ಎಳೆದೊಯ್ಯುವುದನ್ನು ಸ್ಥಳೀಯರು ತಮ್ಮ ಕಣ್ಣಾರೆ ನೋಡಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾಂಡೇಲಿ ನಗರದ ತ್ಯಾಜ್ಯ ಹಾಗೂ ಮಳೆ ನೀರು ಹೊಗಲು ನಾಲೆಗಳನ್ನು ಕಾಳಿ ನದಿಗೆ ಬಿಡಲಾಗಿದೆ. ಇದರ ಮೂಲಕ ಮೊಸಳೆಗಳು ಗ್ರಾಮ ಮತ್ತು ನಗರ ಭಾಗಕ್ಕೆ ಬರುತ್ತಿವೆ. ಹೀಗಾಗಿ ಪ್ರತಿ ದಿನ ಮೊಸಳೆಯ ಕಾಟಕ್ಕೆ ಬೇಸತ್ತ ಜನ ಮೊಸಳೆಗಳು ನಗರ ಭಾಗಕ್ಕೆ ಬಾರದಂತೆ ತಪ್ಪಿಸಲು ನದಿ ಪ್ರದೇಶದ ನಾಲೆಗಳಿಗೆ ತಂತಿಯ ಜರಡಿಯನ್ನು ಹಾಕುವಂತೆ ಒತ್ತಾಯಿಸುತ್ತಿದ್ದಾರೆ.

Share This Article