ಪೊಲೀಸ ಠಾಣೆ ಆವರಣದಲ್ಲಿ ಕೊಳೆತ ಶವ ಪತ್ತೆ!

khushihost
ಪೊಲೀಸ ಠಾಣೆ ಆವರಣದಲ್ಲಿ ಕೊಳೆತ ಶವ ಪತ್ತೆ!

ಬೆಳಗಾವಿ, ೨೪: ಜಪ್ತಿ ಮಾಡಿ ನಿಲ್ಲಿಸಿದ್ದ ಕಾರಿನಲ್ಲಿ ಸುಮಾರು 45 ವರ್ಷದ ಅಪರಿಚಿತ ಪುರುಷನ ಶವ ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ಭಾನುವಾರ ಮುಂಜಾನೆ ಪತ್ತೆಯಾಗಿದೆ.

ಸಂಚಾರಿ ಪೊಲೀಸರು ಕಾರ್, ಟ್ರಕ್ ಸೇರಿದಂತೆ ಅನೇಕ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದು, ಒಂದು ಕಾರಿನ ಹಿಂಬದಿಯ ಸೀಟ್ ನಲ್ಲಿ ಕೊಳೆತು ದುರ್ವಾಸನೆ ಬೀರುತ್ತಿದ್ದ ಶವ ಕಂಡು ಬಂದಿದೆ. ಶವದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲವಾದ್ದರಿಂದ ವ್ಯಕ್ತಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕ್ಯಾಂಪ್ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಳೆತ ಶವದ ಸ್ಥಿತಿಯನ್ನು ಗಮನಿಸಿದರೆ, ವ್ಯಕ್ತಿ ಸುಮಾರು 10-12 ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.

Share This Article