ಹಾವಿನ ಬೆನ್ನಮೇಲೆ ಕುಳಿತ ಕಪ್ಪೆ ವಿಡಿಯೋ: ಸಾವಿನ ಮೇಲೆ ಸವಾರಿ ಎಂದ ಜನ!

khushihost
ಹಾವಿನ ಬೆನ್ನಮೇಲೆ ಕುಳಿತ ಕಪ್ಪೆ ವಿಡಿಯೋ: ಸಾವಿನ ಮೇಲೆ ಸವಾರಿ ಎಂದ ಜನ!

ದಿನವೂ ಸಹಸ್ರಾರು ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ನಕ್ಕು ನಗಿಸುವಂತಿದ್ದರೆ, ಕೆಲವು ಭಯಾನಕ ಎನಿಸುತ್ತವೆ. ಅದರಲ್ಲಿಯೂ ಪ್ರಾಣಿಗಳ ಕುರಿತಾದ ಭಯಾನಕ ವಿಡಿಯೋಗಳು ಸಾಕಷ್ಟು ಕಾಣಸಿಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಇದು ವಿನೋದವೂ, ಭಯಾನಕವೂ ಆಗಿರುವ ವಿಡಿಯೋ ಆಗಿರುವ ಕಾರಣ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಈ ವಿಡಿಯೋ ಅನ್ನು ಎಂಜಾಯ್​ ಮಾಡುತ್ತಿದ್ದಾರೆ.

ಟ್ವಿಟರ್ ಬಳಕೆದಾರ ಸಂಜಯ ಕುಮಾರ ಎನ್ನುವವರು ಈ ವಿಡಿಯೋ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ಹಳದಿ ಬಣ್ಣದ ಹಾವೊಂದು ಹೋಗುತ್ತಿದ್ದು, ಅದರ ಬೆನ್ನ ಮೇಲೆ ಕಪ್ಪೆ ಕುಳಿತಿದೆ. ಕಪ್ಪೆ ಒಂದೇ ಕಡೆ ಕುಳಿತಿದ್ದರೂ ಹಾವು ಹರಿದಾಡುತ್ತಿರುವ ಕಾರಣ ಕಪ್ಪೆ ಜಾರುಬಂಡಿ ಆಡುತ್ತಿರುವಂತೆ ವಿಡಿಯೋದಲ್ಲಿ ಭಾಸವಾಗುತ್ತದೆ.

ಸಾವಿನ ಮೇಲೆ ಸಂಚಾರ ಎಂಬ ಶೀರ್ಷಿಕೆ ಇದಕ್ಕೆ ಸೂಕ್ತ ಎನಿಸುತ್ತದೆ. ಏಕೆಂದರೆ ಹಾವು ಏನಾದರೂ ಹಿಂದಿರುಗಿಬಿಟ್ಟರೆ ಕಪ್ಪೆಯ ಜೀವ ಅಲ್ಲಿಗೇ ಕಥಮ್​. ಹಾವು ಅಲ್ಲಾಡಿದರೆ ಕಪ್ಪೆ ಸುಲಭದಲ್ಲಿ ಜಿಗಿದು ತಪ್ಪಿಸಿಕೊಳ್ಳಬಹುದಾದರೂ ಅಪಾಯ ಅಂತೂ ತಪ್ಪಿದ್ದಲ್ಲ.

10 ಸೆಕೆಂಡ್‌ಗಳ ಈ ಕಿರು ವಿಡಿಯೋ ಹಾಸ್ಯಭರಿತವಾಗಿಯೂ, ಸೂಕ್ಷ್ಮವಾಗಿ ಅವಲೋಕಿಸಿದಾಗ ಭಯಾನಕವೂ ಆಗಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Share This Article