ಮದುವೆಯಾಗು ಅಂದಿದ್ದಕ್ಕೆ ಪ್ರೇಯಸಿಯನ್ನು ಕೊಂದು ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿದ ಪ್ರಿಯಕರ!

khushihost
ಮದುವೆಯಾಗು ಅಂದಿದ್ದಕ್ಕೆ ಪ್ರೇಯಸಿಯನ್ನು ಕೊಂದು ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿದ ಪ್ರಿಯಕರ!

ಹಾಸನ: ಮದುವೆಯಾಗುವಂತೆ ಕೇಳುತ್ತಿದ್ದ ಮಹಿಳೆಯನ್ನು ಆತನ ಪ್ರಿಯಕರ ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಹೊಳೆನರಸೀಪುರ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ತಹಶೀಲ್ದಾರ ಕೆ.ಕೆ. ಕೃಷ್ಣಮೂರ್ತಿ ನೇತೃತ್ವದಲ್ಲಿ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅರಕಲಗೂಡು ತಾಲೂಕಿನ ಮುದ್ದಲಾಪುರದ ಬಿಬಿಎಂ ಪದವಿಧರೆ ಕಾವ್ಯಾ(29) ಕೊಲೆಯಾದ ಮಹಿಳೆ. ಪರಸನಹಳ್ಳಿಯ ಅವಿನಾಶ ಕೊಲೆ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.

ಕಾವ್ಯಾಗೆ ಈ ಮೊದಲು ಅಕ್ಷಯ ಎಂಬುವನ ಜೊತೆ ಮೊದಲನೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಅವಿವಾಹಿತನಾಗಿದ್ದ ಅವಿನಾಶನನ್ನು ಪ್ರೀತಿಸುತ್ತಿದ್ದ ಕಾವ್ಯಾ ಮದುವೆಯಾಗದಿದ್ದರೂ ಒಟ್ಟಿಗೆ ವಾಸವಾಗಿದ್ದು, ಆತನ ಜೊತೆಗಿದ್ದಾಗ ಪಿಜಿಯಲ್ಲಿ ಇರುವುದಾಗಿ ಪೋಷಕರಿಗೆ ಹೇಳಿದ್ದರು.

ಕಾವ್ಯಾ ಪೋಷಕರಿಗೆ ನವೆಂಬರ 25 ರಿಂದ ಕರೆ ಮಾಡಿರಲಿಲ್ಲ. ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ 15 ದಿನದ ಹಿಂದೆ ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಮೃತದೇಹ ಹೂತು ಹಾಕಿರುವುದಾಗಿ ಆರೋಪಿ ತಿಳಿಸಿದ್ದಾನೆ.

ತಹಶೀಲ್ದಾರ ನೇತೃತ್ವದಲ್ಲಿ ಇನ್ಸಪೆಕ್ಟರ್ ಪ್ರದೀಪ, ನಗರ ಠಾಣೆ ಎಸ್ಐ ಅರುಣ ಕುಮಾರ ಮೃತದೇಹ ಹೊರಗೆ ತೆಗೆಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕ ಹರಿರಾಮ ಶಂಕರ ತಿಳಿಸಿದ್ದಾರೆ.

Share This Article