2 ತಿಂಗಳ ಮಗುವನ್ನು ಕಣಬರಗಿ ಕೆರೆಗೆಸೆದು ಓಡಿದ ತಾಯಿ!

khushihost
2 ತಿಂಗಳ ಮಗುವನ್ನು ಕಣಬರಗಿ ಕೆರೆಗೆಸೆದು ಓಡಿದ ತಾಯಿ!

ಬೆಳಗಾವಿ : ಹೆತ್ತ ತಾಯಿಯೇ ಎರಡು ತಿಂಗಳ ಮಗುವನ್ನು ಕೆರೆಗೆ ಎಸೆದ ಘಟನೆ ಬೆಳಗಾವಿ‌‌ ತಾಲೂಕಿನ ಕಣಬರಗಿ ಗ್ರಾಮದಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಮಗು ಕೆರೆಗೆ ಎಸೆಯುವುದನ್ನು ನೋಡಿದ ದನ, ಕರು ತೊಳೆಯುತ್ತಿದ್ದ ಯುವಕರು ತಕ್ಷಣವೇ ಕೆರೆಗೆ ಹಾರಿ ಮಗು ರಕ್ಷಣೆ ಮಾಡಿದ್ದಾರೆ.

ಕಣಬರಗಿ ಗ್ರಾಮದ ನಿವಾಸಿ ಶಾಂತಾ ರಾಬರ್ಟ‌ ಕರವಿನಕೊಪ್ಪ ಎಂಬುವವಳು ಈ ಕೃತ್ಯ‌ವೆಸಗಿದ್ದಾಳೆ ಎಂದು ಹೇಳಲಾಗಿದೆ. ಮಗುವನ್ನು ಬೆಳಗಾವಿ ನಗರದ ಚಿಕ್ಕ ಮಕ್ಕಳ ಖಾಸಗಿ ಆಸ್ಪತ್ರೆಗೆ ಮಗು ದಾಖಲಿಸಲಾಗಿದೆ.

ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಶಾಂತಾ ಗೃಹಿಣಿಯಾಗಿದ್ದು ಗಂಡ  ಕೆಲಸಕ್ಕೆ ಹೋಗಿದ್ದಾಗ ಮಗುವನ್ನು ಎತ್ತಿಕೊಂಡು ಕೆರೆಗೆ ಬಂದಿದ್ದಳು. ಕೆಲ ಹೊತ್ತು ಅಲ್ಲಿಯೇ ಓಡಾಡಿದ ಬಳಿಕ ಮಗುವನ್ನು ಕೆರೆಗೆ ಎಸೆದು ಅಲ್ಲಿಂದ ಓಡಿದ್ದಾಳೆ. ಅದೃಷ್ಟವಶಾತ್ ಇದನ್ನು ಗಮನಿಸಿದ ಅಲ್ಲಿದ್ದವರೊಬ್ಬರು ಜನರನ್ನು ಕೂಗಿ ಕರೆದಿದ್ದಾರೆ. ಆಗ ಪುಣ್ಯಾತ್ಮನೊಬ್ಬ  ಕೂಡಲೇ ಕೆರೆಗೆ ಹಾರಿ ಮಗುವನ್ನು ರಕ್ಷಣೆ ಮಾಡಿದರು. ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಬಳಿಕ ಆಸ್ಪತ್ರೆಗೆ ಹೋಗಿ ಮಗುವಿನ ಆರೋಗ್ಯದ ಕುರಿತು ವಿಚಾರಿಸಿ ತಾಯಿಯನ್ನು ಬಂಧಿಸಿದ್ದಾರೆ. ಮಗುವಿಗೆ ನಿರಂತರವಾಗಿ ಫಿಟ್ಸ ಬರುತ್ತಿದೆ ಹಾಗೂ ಅಪಸ್ಮಾರವೂ ಇದೆ.  ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದ ಕಾರಣ ಈ ಕೃತ್ಯ ಎಸಗಿರುವುದಾಗಿ  ಪ್ರಾಥಮಿಕ ತನಿಖೆ ವೇಳೆ ಆಕೆ ತಿಳಿಸಿದ್ದಾಳೆ ಎನ್ನಲಾಗಿದೆ.

Share This Article