ಸಿಕ್ಕಿಬಿದ್ದರು ಸುಳೇಭಾವಿ ಗ್ರಾಮದ ಜೋಡಿ ಕೊಲೆ ಹಂತಕರು

khushihost
ಸಿಕ್ಕಿಬಿದ್ದರು ಸುಳೇಭಾವಿ ಗ್ರಾಮದ ಜೋಡಿ ಕೊಲೆ ಹಂತಕರು

ಬೆಳಗಾವಿ : ಗುರುವಾರ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದು ತಾವೇ ಕೊಲೆ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ಸುಳೇಭಾವಿ ಗ್ರಾಮದ ಶಶಿಕಾಂತ ಅಲಿಯಾಸ್ ಸಸಾ ಅಲಿಯಾಸ್ ಜುಟ್ಟು ಭೀಮಶಿ‌ ಮಿಸಾಳೆ (24), ಯಲ್ಲೇಶ ಸಿದರಾಯಿ ಹುಂಕರಿಪಾಟೀಲ (22), ಮಂಜುನಾಥ ಶಿವಾಜಿ ಪರೋಜಿ (22), ದೇವಪ್ಪ ರವಿ ಕುಕಡೊಳ್ಳಿ (26), ಖನಗಾಂವ ಬಿ.ಕೆ. ಗ್ರಾಮದ ಸಂತೋಷ ಯಲ್ಲಪ್ಪ‌ ಹಣಬರಟ್ಟಿ (20), ಭರಮಣ್ಣ ನಾಗಪ್ಪ ನಾಯಕ (20) ಬಂಧಿತ ಆರೋಪಿಗಳು.

ಈ ಕುರಿತು ಮಾಹಿತಿ ನೀಡಿದ ಡಿಸಿಪಿ ರವೀಂದ್ರ ಗಡಾದಿ, ಆರೋಪಿಗಳ ವಿಚಾರಣೆಯಲ್ಲಿ ಆರೋಪಿಗಳು ತಾವೇ ಮಾರಕಾಸ್ತ್ರಗಳಿಂದ ದಾಳಿಮಾಡಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರು ಜನರಲ್ಲಿ ಕೆಲವರು ಕಟ್ಟಡ ಕಾರ್ಮಿಕರಾಗಿದ್ದಾರೆ ಮತ್ತು ಕೆಲವರು ನಿರುದ್ಯೋಗಿಗಳಾಗಿದ್ದರು.

ಇನ್ನು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮಾರೀಹಾಳ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

Share This Article