ಬೆಳಗಾವಿಯಲ್ಲಿ ಟ್ಯೂಷನ್ ಹೊರಟಿದ್ದ ಬಾಲಕಿ ಅಪಹರಣಕ್ಕೆ ಯತ್ನ; ವ್ಯಕ್ತಿಯೊಬ್ಬ ವಶಕ್ಕೆ

khushihost
ಬೆಳಗಾವಿಯಲ್ಲಿ ಟ್ಯೂಷನ್ ಹೊರಟಿದ್ದ ಬಾಲಕಿ ಅಪಹರಣಕ್ಕೆ ಯತ್ನ; ವ್ಯಕ್ತಿಯೊಬ್ಬ ವಶಕ್ಕೆ

ಬೆಳಗಾವಿ, ಜು.12:- ನಗರದಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನಿಸಿದ ಪ್ರಕರಣ  ಬೆಳಗಾವಿ ಜನರನ್ನು ಬೆಚ್ಚಿಬೀಳಿಸಿದ್ದು ಈ ಘಟನೆಯ ಸಂಬಂಧ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಳಗಾವಿಯ ಗಜಾನನ ಪಾಟೀಲ (40) ಎಂದು ಗೊತ್ತಾಗಿದ್ದು 12 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಬಂದಿದೆ.

ಮಂಗಳವಾರ ಸಂಜೆ ಆರೋಪಿಯು ಟ್ಯೂಷನ್‌ಗೆ ಹೋಗುತ್ತಿದ್ದ 9 ನೇ ತರಗತಿ ವಿದ್ಯಾರ್ಥಿನಿಯನ್ನು ಚಾಕಲೇಟ್ ಆಸೆ ತೋರಿಸಿ ಎತ್ತಿಕೊಂಡು ಹೋಗಿ ಅಪಹರಿಸಲು ಯತ್ನಿಸಿದ್ದ, ಈ ವೇಳೆ ಬಾಲಕಿ ಆತನ ಬೆನ್ನಿಗೆ ಗುದ್ದಿದ್ದಾಳೆ. ಅಲ್ಲದೇ ಕಿರುಚಿದ್ದರಿಂದ ಜನರು ಧಾವಿಸಿ ಬಂದಾಗ ಆರೋಪಿ ಓಡಿ ಹೋಗಿದ್ದಾನೆ.

ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ಘಟನೆಯ ಬಗ್ಗೆ ಹೆತ್ತವರು ಟಿಳಕವಾಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಸದ್ಯ ಆತನನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.

Share This Article