ಆಸ್ಪತ್ರೆಯಿಂದ ಓಡಿಹೋಗಿದ್ದ ಕೈದಿ ಕೋರ್ಟ್ ಸಮೀಪ ಬಂಧನ

khushihost
ಆಸ್ಪತ್ರೆಯಿಂದ ಓಡಿಹೋಗಿದ್ದ ಕೈದಿ ಕೋರ್ಟ್ ಸಮೀಪ ಬಂಧನ

ಬೆಳಗಾವಿ: ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಚಿಕಿತ್ಸೆಗೆ ದಾಖಲಾಗಿದ್ದ ಕೈದಿ ಬಾತ್ ರೂಮ್ ಗೆ ಹೋಗಿ ಬರುವುದಾಗಿ ಹೇಳಿ ತಪ್ಪಿಸಿಕೊಂಡು, ಮತ್ತೆ ಅರೆಸ್ಟ್ ಆಗಿದ್ದಾನೆ.

ಪೋಕ್ಸೋ ಕೇಸ್ ನಲ್ಲಿ ಶಿಕ್ಷೆಗೆ ಒಳಪಟ್ಟ ಕೈದಿ
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್ ಲಂಬುಗೋಳ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದ‌. ಈ  ವೇಳೆ ಬಾತ್ ರೂಮ್ ಗೆ ಹೋಗಿ ಬರೋದಾಗಿ ಹೇಳಿ ತಪ್ಪಿಸಿಕೊಂಡು ಓಡಿಹೋಗಿದ್ದ ಅವನನ್ನು ಪೊಲೀಸರು ಕೋರ್ಟ್ ಆವರಣದಲ್ಲಿ ಲ್
ವಶಕ್ಕೆ ಪಡೆದಿದ್ದಾರೆ.

ಆರೋಪಿ ಪೋಕ್ಸೋ ಕೇಸ್ ನಲ್ಲಿ 20 ವರ್ಷಗಳ ಕಾಲ ಶಿಕ್ಷೆಗೆ ಒಳಗಾಗಿ ಹಿಂಡಲಗಾ ಜೈಲಿನಲ್ಲಿದ್ದ. ಮಂಗಳವಾರ ಬೆಳಿಗ್ಗೆ 8.35ಕ್ಕೆ ಬಾತ್ ರೂಮ್ ಗೆ ಹೋಗಿ ಬರೋದಾಗಿ ಹೇಳಿ ಕೈದಿ ತಪ್ಪಿಸಿಕೊಂಡು ಹೊರಗೆ ಹೋಗಿ ಸಂಜೆಯವರೆಗೂ ಆಸ್ಪತ್ರೆ ಆವರಣದಲ್ಲೇ ಅಡಗಿಕೊಂಡಿದ್ದ. ಪೊಲೀಸರು ಇಡಿ ದಿನ ಹುಡುಕಿದರೂ ಸಿಕ್ಕಿರಲಿಲ್ಲ. ಸಂಜೆ 6 ಗಂಟೆ ಸುಮಾರು ಓಡಿ ಹೋಗಲು ಪ್ಲಾನ್ ಮಾಡಿದ್ದಾನೆ. ಓಡಿಹೋಗುವಾಗ ಕೋರ್ಟ್ ಆವರಣದ ಪಕ್ಕದಲ್ಲಿ ಅವನನ್ನು ಹಿಡಿದು ಮತ್ತೇ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.

Share This Article