60 ಯುವತಿಯರು ಸ್ನಾನ ವಿಡಿಯೋ ಮಾಡಿದ ವಿದ್ಯಾರ್ಥಿನಿ

khushihost
60 ಯುವತಿಯರು ಸ್ನಾನ ವಿಡಿಯೋ ಮಾಡಿದ ವಿದ್ಯಾರ್ಥಿನಿ

ಮೊಹಾಲಿ: ಮೊಹಾಲಿಯ ಚಂಡೀಗಢ ವಿಶ್ವವಿದ್ಯಾನಿಲಯದ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಟ್ಟು 60 ವಿದ್ಯಾರ್ಥಿನಿಯರು ಸ್ನಾನದ ವಿಡಿಯೋಗಳು ಹರಿದಾಡುತ್ತಿದೆ ಎನ್ನಲಾಗಿದೆ.

ಆಘಾತಕಾರಿ ಸಂಗತಿ ಎಂದರೆ ಈ ವಿಡಿಯೋಗಳನ್ನು ಅದೇ ಹಾಸ್ಟೆಲ್ ನ ವಿದ್ಯಾರ್ಥಿನಿ ವಿಡಿಯೋ ಮಾಡಿ ತನ್ನ ಸ್ನೇಹಿತಿಗೆ ಕಳುಹಿಸಿದ್ದಾರೆ.

ವಿಡಿಯೊಗಳನ್ನು ಶೇರ್‌ ಮಾಡಿದ್ದ ಸಹ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿಯರ ವಿಡಿಯೊಗಳನ್ನು ಚಿತ್ರೀಕರಿಸಿದ್ದ ಆಕೆ, ಶಿಮ್ಲಾದಲ್ಲಿರುವ ಯುವಕನಿಗೆ ಕಳುಹಿಸಿದ್ದರು. ಆತ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಿಂದ ಮನನೊಂದು 8 ಜನ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

https://twitter.com/unapologeticAnk/status/1571225138703765506?t=VPrthf_wbD98Jxr0Ag4cdA&s=19

ಆದರೆ ಈ ಬಗ್ಗೆ ಮಾತನಾಡಿರುವ ಮೊಹಾಲಿ ಎಸ್ ಪಿ, ಬಂಧಿತ ವಿದ್ಯಾರ್ಥಿನಿ ಬೇರೆ ಯಾವ ವಿದ್ಯಾರ್ಥಿನಿಯರ ವಿಡಿಯೋಗಳನ್ನು ಮಾಡಿಲ್ಲ, ತನ್ನದೇ ವಿಡಿಯೋ ಮಾಡಿ ಸ್ನೇಹಿತನಿಗೆ ಕಳುಹಿಸಿದ್ಧಾಳೆ ಎಂದು ಹೇಳಿದ್ದಾರೆ.

ಇದು ಸೂಕ್ಷ್ಮ ವಿಚಾರವಾಗಿದೆ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತರುವ ಕಳವಳಕಾರಿ ಸಂಗತಿಯಾಗಿದೆ. ಮಾಧ್ಯಮಗಳೂ ಸೇರಿದಂತೆ ನಾವೆಲ್ಲರೂ ಜಾಗರೂಕರಾಗಿರಬೇಕು. ಇದು ಸಮಾಜದ ಎದುರಿಗಿರುವ ಪರೀಕ್ಷೆಯೂ ಹೌದು ಎಂದು‌ ಪಂಜಾಬ‌ ಶಿಕ್ಷಣ ಸಚಿವ ಹರಜೋತ‌ ಸಿಂಗ್‌ ಬಯಾನ್ಸ್ ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

Share This Article