ಬೈಕ್ ಮೇಲೆ ಮರ ಬಿದ್ದು ಯುವಕನ ಸಾವು 

khushihost
ಬೈಕ್ ಮೇಲೆ ಮರ ಬಿದ್ದು ಯುವಕನ ಸಾವು 

ಬೆಳಗಾವಿ : ಬೈಕ್ ಮೇಲೆ ಮರ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಗರದ ರಾಯಣ್ಣ ಸರ್ಕಲ್ ಬಳಿ ನಡೆದಿದೆ.

ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ಇಬ್ಬರು ಯುವಕರು ಚನ್ನಮ್ಮ ಸರ್ಕಲ್ ಕಡೆಗೆ ಬೈಕ್ ಮೇಲೆ ಹೊರಟಿದ್ದರು. ಈ ವೇಳೆ ದೊಡ್ಡ ಮರ ಬೈಕ್ ಮೇಲೆ ಬಿದ್ದ ಪರಿಣಾಮ ಗೋಕಾಕ ತಾಲ್ಲೂಕಿನ ಸುಲಧಾಳ ಗ್ರಾಮದ 25 ವರ್ಷದ ರಾಕೇಶ ಸುಲದಾಳ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು,ಇ‌ನ್ನೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

Share This Article