ಮದುವೆ ಸಮಾರಂಭದಲ್ಲಿ ಡಾನ್ಸ ಮಾಡುವಾಗ ಕುಸಿದು ಬಿದ್ದು ಸಾವಿಗೀಡಾದ ವ್ಯಕ್ತಿಯ ವಿಡಿಯೋ ವೈರಲ್

khushihost
ಮದುವೆ ಸಮಾರಂಭದಲ್ಲಿ ಡಾನ್ಸ ಮಾಡುವಾಗ ಕುಸಿದು ಬಿದ್ದು ಸಾವಿಗೀಡಾದ ವ್ಯಕ್ತಿಯ ವಿಡಿಯೋ ವೈರಲ್

ವಾರಣಾಸಿ, ೩೦- ಕರ್ನಾಟಕದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗ್ರಾಮ ಒಂದರಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ನಡೆದಿದೆ.

ವಾರಣಾಸಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ.

ಪತ್ರಕರ್ತ ಪುನೀತ ಕುಮಾರ ಸಿಂಗ್ ಎಂಬವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದು, ಆರೋಗ್ಯವಂತರಾಗಿ ಲವಲವಿಕೆಯಿಂದ ಇದ್ದ ಜನರೇಕೆ ಹೀಗೆ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಇದನ್ನು ತಿಳಿದುಕೊಳ್ಳುವ ಸಲುವಾಗಿ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Share This Article