ಚನ್ನಮ್ಮ ವೃತ್ತದಲ್ಲಿ ಬಸ್ ಚಕ್ರಕ್ಕೆ ಸಿಲುಕಿ ಮಹಿಳೆಯ ಮೃತ್ಯು

khushihost
ಚನ್ನಮ್ಮ ವೃತ್ತದಲ್ಲಿ ಬಸ್ ಚಕ್ರಕ್ಕೆ ಸಿಲುಕಿ ಮಹಿಳೆಯ ಮೃತ್ಯು

ಬೆಳಗಾವಿ,  ೧೧:  ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ ಅಸುನೀಗಿದ ಘಟನೆ ಸೋಮವಾರ ಮುಂಜಾನೆ ಬೆಳಗಾವಿಯ ಕಿತ್ತೂರು  ಚನ್ನಮ್ಮ ವೃತ್ತದಲ್ಲಿ ಸಂಭವಿಸಿದೆ.

ಅಂಬೇಡ್ಕರ ಉದ್ಯಾನವನದ ಕಡೆಯಿಂದ ಬಸ್ ಸ್ಟಾಂಡ್ ಗೆ ತೆರಳುತ್ತಿದ್ದ ನಗರ ಸಾರಿಗೆ ಬಸ್ ಕನ್ನಡ ಸಾಹಿತ್ಯ ಭವನದ ಎದುರು ಹೋಗುತ್ತಿದ್ದಾಗ ರಸ್ತೆ ದಾಟ್ಟುತ್ತಿದ್ದ ಮಹಿಳೆ ಹಿಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತ ಮಹಿಳೆಗೆ ಅಂದಾಜು 60 ವರುಷ ವಯಸ್ಸಾಗಿತ್ತು.

ಅಪಘಾತದ ಕುರಿತು ಸಂಚಾರಿ ದಕ್ಷಿಣ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article