ಬೈಕ್‌ಗೆ ಬಸ್ ಡಿಕ್ಕಿ: ಅಥಣಿ ತಾಲ್ಲೂಕಿನ ಮಹಿಳೆಯ ಸಾವು

khushihost
ಬೈಕ್‌ಗೆ ಬಸ್ ಡಿಕ್ಕಿ: ಅಥಣಿ ತಾಲ್ಲೂಕಿನ ಮಹಿಳೆಯ ಸಾವು

ವಿಜಯಪುರ: ಬೈಕ್‌ಗೆ ಹಿಂಬದಿಯಿಂದ ಸರ್ಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಬಳಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಮುತ್ತವ್ವ ಗಸ್ತಿ (40) ಮೃತ ಮಹಿಳೆ. ಅಪಘಾತದ ಬಳಿಕ ಬಸ್ ಬಿಟ್ಟು ಕಂಡಕ್ಟರ್, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಬಬಲೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article