ಮತಗಟ್ಟೆಯಲ್ಲಿಯೇ ಶಿಶುವಿಗೆ ಜನ್ಮ ನೀಡಿದ ಮಹಿಳೆ

khushihost
ಮತಗಟ್ಟೆಯಲ್ಲಿಯೇ ಶಿಶುವಿಗೆ ಜನ್ಮ ನೀಡಿದ ಮಹಿಳೆ

ಬಳ್ಳಾರಿ, ೧೦- 23 ವರ್ಷದ ತುಂಬು ಗರ್ಭಿಣಿ ಮತಗಟ್ಟೆಯಲ್ಲಿಯೇ ಶಿಶುವಿಗೆ ಜನ್ಮನೀಡಿದ ಕುತೂಹಲಕಾರಿ ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಕೊರ್ಲಗುಂಡಿ ಎಂಬಲ್ಲಿ ಅಪರೂಪದ ಘಟನೆ ನಡೆದಿದ್ದು, 23 ವರ್ಷದ ತುಂಬು ಗರ್ಭಿಣಿ ಮತಗಟ್ಟೆಯಲ್ಲಿ ಶಿಶುವಿಗೆ ಜನ್ಮನೀಡಿದರು.

ಗರ್ಭಿಣಿಗೆ ಮತಗಟ್ಟೆ ಬಳಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ ಅಲ್ಲಿದ್ದ ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ಮತದಾರರು ನೆರವಿಗೆ ಬಂದು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.

Share This Article