ಮೂರು ಗಂಟೆ ಹೃದಯ ಬಡಿತ ನಿಂತರೂ ಬದುಕುಳಿದ ಮಹಿಳೆ!

khushihost
ಮೂರು ಗಂಟೆ ಹೃದಯ ಬಡಿತ ನಿಂತರೂ ಬದುಕುಳಿದ ಮಹಿಳೆ!

ಲಖನೌ : ಉತ್ತರ ಪ್ರದೇಶದ ಮೀರತ್‌ನಲ್ಲಿ ಮೂರು ಗಂಟೆ ಹೃದಯ ಕೆಲಸ ಮಾಡದೇ ನಿಂತರೂ ಮಹಿಳೆ ಬದುಕಿರುವ ಘಟನೆ ಬೆಳಕಿಗೆ ಬಂದಿದೆ.

ಮೀರತ್ ನ ಕಂಕರ‌ ಖೇಡಾ ನಿವಾಸಿ 34 ವರ್ಷದ ಕವಿತಾ ರಾಜು ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ಅವರ ಹೃದಯ 210 ನಿಮಿಷ ನಿಂತರೂ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ವೀರತ‌ ಲಾಲಾ ಲಜಪತ‌ ರಾಯ್‌ ಮೆಮೊರಿಯಲ್‌ ವೈದ್ಯಕೀಯ ಕಾಲೇಜಿನಲ್ಲಿ ಈ ಅದ್ಬುತ ಪವಾಡ ನಡೆದಿದೆ.

ಆದರೆ ಇಷ್ಟು ಗಂಟೆಗಳ ಕಾಲ ಸಹಜ ಹೃದಯ ಬಡಿತವನ್ನು ನಿಲ್ಲಿಸಿರುವುದು ವೈದ್ಯಕೀಯ ಲೋಕದಲ್ಲೇ ತಲ್ಲಣ ಮೂಡಿಸಿದೆ . ಒಂದು ವೇಳೆ ಶಸ್ತ್ರ ಚಿಕಿತ್ಸೆ ಮಾಡುವಾಗ ಮೂರು ನಿಮಿಷ ಕಾಲ ಮೆದುಳಿಗೆ ರಕ್ತ ಪೂರೈಕೆ ಆಗದಿದ್ದರೆ ಮೆದುಳು ನಿಷ್ಕ್ರೀಯಗೊಳ್ಳುವ ಸಾಧ್ಯತೆ ಇರುತ್ತದೆ.

ಪ್ರತಿಯೊಬ್ಬ ರೋಗಿಗೆ ಶಸ್ತ್ರ ಚಿಕಿತ್ಸೆಯ ವೇಳೆ 3 ನಿಮಿಷ ತುಂಬಾ ಅಮೂಲ್ಯವಾಗಿದೆ. ಕವಿತಾ ಅವರು ಕಳೆದ ಎರಡು ವರ್ಷಗಳಿಂದ ಅಸಹಜ ಹೃದಯ ಬಡಿತ ಮತ್ತು ಎದೆ ನೋವಿನಿಂದ ಬಳಲುತ್ತಿದ್ದರು.

ಹಲವು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಲೋಚನೆ ನಡೆಸಿದರೂ, ಚಿಕಿತ್ಸೆ ಮಾತ್ರ ಸಿಕ್ಕಿರಲಿಲ್ಲ. ಅವರು ಮೀರತ್ ವೈದ್ಯಕೀಯ ಕಾಲೇಜಿನ ಕಾರ್ಡಿಯೋ ಥೋರಾಸಿಕ್ ಸರ್ಜನ್​ ಜತೆ ಸಮಾಲೋಚನೆ ನಡೆಸಿದ್ದರು. ಅವರನ್ನು ಪರೀಕ್ಷೆ ಮಾಡಿದಾಗ ಮಿಟ್ರಲ್ ವಾಲ್ವ್ ಹಾನಿಗೊಳಗಾಗಿರುವುದು ಕಂಡುಬಂದಿತ್ತು. ಮಿಟ್ರಲ್ ಕವಾಟವನ್ನು ಬದಲಿಸಲು ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು ಮತ್ತು ಇದೀಗ ಯಶಸ್ವಿಯಾಗಿದ್ದೇವೆ ಎಂದು ವೈದ್ಯಕೀಯ ಕಾಲೇಜಿನ ಮಾಧ್ಯಮ ಪ್ರಭಾರಿ ಡಾ. ವಿ.ಡಿ. ಪಾಂಡೆ ತಿಳಿಸಿದ್ದಾರೆ.

Share This Article