ಪತ್ನಿ ಕಾಮದಾಹಕ್ಕೆ ಬಲಿಯಾದ ಪತಿ: ದಾರಿ ತಪ್ಪಿದ ಮಹಿಳೆ ಪ್ರಿಯಕರನಿಂದ ಘೋರ ಕೃತ್ಯ

khushihost
ಪತ್ನಿ ಕಾಮದಾಹಕ್ಕೆ ಬಲಿಯಾದ ಪತಿ: ದಾರಿ ತಪ್ಪಿದ ಮಹಿಳೆ ಪ್ರಿಯಕರನಿಂದ ಘೋರ ಕೃತ್ಯ

ರಾಮನಗರ: ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿಯಾದ ಘಟನೆ ಹಾರೋಹಳ್ಳಿಯಲ್ಲಿ ನಡೆದಿದೆ. 27 ವರ್ಷದ ಕಿರಣ ಮೃತಪಟ್ಟ ಯುವಕ.

ಸುಟ್ಟು ಕರಕಲಾದ ಸ್ಥಿತಿಯಲ್ಲಿ ಗೊಟ್ಟಿಗೆಹಳ್ಳಿ ಗ್ರಾಮದ ಸಮೀಪ ಗುಳಹಟ್ಟಿ ಅರಣ್ಯ ಪ್ರದೇಶದಲ್ಲಿ ಕಿರಣ ಮೃತದೇಹ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಕಿರಣ ಪತ್ನಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತನಾದ ಪ್ರಮುಖ ಆರೋಪಿ ಯಶವಂತ ಜೊತೆಗೆ ಕಿರಣ ಪತ್ನಿ ಅಕ್ರಮ ಸಂಬಂಧ ಬೆಳೆಸಿದ್ದಳು. ಕಿರಣ ಇದ್ದರೆ ತಮ್ಮ ಸಂಬಂಧ ಮುಂದುವರಿಸಲು ಕಷ್ಟವಾಗುತ್ತದೆ ಎಂದು ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ. ಪೊಲೀಸರ ತನಿಖೆಯಲ್ಲಿ ಕೊಲೆ ರಹಸ್ಯ ಬಯಲಾಗಿದ್ದು, ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Share This Article