ಗಣಪತಿ ವಿಸರ್ಜನೆ ವೇಳೆ ಹೊಡೆದಾಟ; ಚಾಕು ಇರಿತಕ್ಕೆ ಯುವಕ ಬಲಿ

khushihost
ಗಣಪತಿ ವಿಸರ್ಜನೆ ವೇಳೆ ಹೊಡೆದಾಟ; ಚಾಕು ಇರಿತಕ್ಕೆ ಯುವಕ  ಬಲಿ

ಬೆಳಗಾವಿ : ಗಣಪತಿ ವಿಸರ್ಜನೆ ವೇಳೆ ಯುವಕನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಅರ್ಜುನಗೌಡ ಪಾಟೀಲ (20) ಹತ್ಯೆ ಮಾಡಲಾಗಿದೆ. ಅರ್ಜುನಗೌಡ ಪಾಟೀಲ ಕುಸಿದು ಬೀಳುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮುರುಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share This Article