ಪೊಲೀಸ್ ಠಾಣೆಯಲ್ಲಿ ಕುತ್ತಿಗೆ ಕೊಯ್ದುಕೊಂಡ ಯುವಕ 

khushihost
ಪೊಲೀಸ್ ಠಾಣೆಯಲ್ಲಿ ಕುತ್ತಿಗೆ ಕೊಯ್ದುಕೊಂಡ ಯುವಕ 

ಹುಬ್ಬಳ್ಳಿ : ಊಟದ ವಿಷಯದಲ್ಲಿ ಹೋಟೆಲ್ ಮಾಲೀಕರೊಬ್ಬರೊಂದಿಗೆ ಜಗಳವಾಡಿಕೊಂಡು ನಂತರ ಅವರೊಂದಿಗೆ ಪೊಲೀಸ್ ಠಾಣೆಗೆ ತೆರಳಿದ್ದ ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಹಳೇ ಹುಬ್ಬಳ್ಳಿಯ ಇಂಡಿ ಪೆಟ್ರೋಲ್ ಪಂಪ್ ಸರ್ಕಲ್ ಬಳಿಯ ಬಿರಿಯಾನಿ ಹೌಸ್ ಹೋಟೆಲಗೆ ಊಟಕ್ಕೆ ಹೋಗಿದ್ದ ರಾಘವೇಂದ್ರ ಎಂಬ ಯುವಕ ಮಾಲೀಕರೊಂದಿಗೆ ಊಟದ ವಿಷಯದಲ್ಲಿ ಆಕ್ಷೇಪಿಸಿದ್ದಾರೆ. ಆಗ ಉಭಯರ ಮಧ್ಯೆ ವಾದವಾಗಿದೆ.

ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋಗಿ ಹೋಟೆಲ್ ಮಾಲೀಕರು ರಾಘವೇಂದ್ರ ನನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಆಗ ಪೊಲೀಸರು ಇಬ್ಬರನ್ನೂ ವಿಚಾರಿಸುತ್ತಿದ್ದರು, ತಕ್ಷಣ ತನ್ನ ಬಳಿಯಲ್ಲಿದ್ದ ಗಡ್ಡ ತೆಗೆಯಲು ಬಳಸುವ ಬ್ಲೇಡ್ ತೆಗೆದ ರಾಘವೇಂದ್ರ ಪೊಲೀಸರ ಮುಂದೆಯೇ ಬ್ಲೇಡನಿಂದ ತಮ್ಮ ಕುತ್ತಿಗೆ ಕೊಯ್ದುಕೊಂಡಿದ್ದಾರೆ.

ಈ ವೇಳೆ ವಿಚಾರಣೆ ಮಾಡುತ್ತಿದ್ದ ಠಾಣೆಯ ಹಿರಿಯ ಪೊಲೀಸ ಅಧಿಕಾರಿಗಳು ರಾಘವೇಂದ್ರ ಅವರನ್ನು ಆಸ್ಪತ್ರೆಗೆ ಸೇರಿಸುವಂತೆ ತಮ್ಮ ಅಧೀನದ ಸಿಬ್ಬಂದಿಗಳಿಗೆ ಆದ್ದೇಶಿಸಿ ಠಾಣೆಯಿಂದ ಹೊರಗೆ ಹೋದರೆಂದು ತಿಳಿದು ಬಂದಿದೆ.

ಹೋಟೆಲ್ ಮಾಲೀಕರ ಪರಿಚಯವಿದ್ದ ಪೊಲೀಸರು ಅವರ ಪರವಾಗಿ ವಾದಿಸಿ ರಾಘವೇಂದ್ರ ಅವರನ್ನು ಹಲವು ಕೇಸ್ ಹಾಕಿ ಬೆದರಿಸಿದ್ದಾರೆ. ಇದರಿಂದ ಹೆದರಿ ರಾಘವೇಂದ್ರ ಬ್ಲೇಡ್ ನಿಂದ ತಮ್ಮ ಕುತ್ತಿಗೆ ಕೊಯ್ದು ಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಕ್ತಸ್ರಾವವಾಗುತ್ತಿದ್ದ ರಾಘವೇಂದ್ರನನ್ನು ಹೋಟೆಲ್ ನವರೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

Share This Article