ಪ್ರಿಯಕರನಿಗಾಗಿ ಅಮೇರಿಕಾದಿಂದ ಬಂದ ಯುವತಿ!

khushihost
ಪ್ರಿಯಕರನಿಗಾಗಿ ಅಮೇರಿಕಾದಿಂದ ಬಂದ ಯುವತಿ!

ಹೈದರಾಬಾದ, ೧೦: ಪ್ರೀತಿ-ಪ್ರೇಮಕ್ಕೆ ದೇಶ, ಭಾಷೆ, ಜಾತಿ, ಬಣ್ಣ ಗೊತ್ತಿಲ್ಲ. ತಾನು ಪ್ರೀತಿಸಿದ ಯುವಕನಿಗಾಗಿ ದೂರದ ಅಮೇರಿಕಾದ ಯುವತಿ ಭಾರತದ ಪುಟ್ಟ ಹಳ್ಳಿಗೆ ಬಂದಿದ್ದಾಳೆ.

ಇನಸ್ಟಾಗ್ರಾಂನಲ್ಲಿ ಪ್ರೇಮಾಂಕುರವಾದ ನಂತರ ಪ್ರೇಮಿಯನ್ನು ಮದುವೆಯಾಗಲು ಛಾಯಾಗ್ರಾಹಕಿಯಾಗಿರುವ ಜಾಕ್ವೆಲಿನ್ ಫೊರೆರೊ ಭಾರತದ ಆಂಧ್ರಕ್ಕೆ ಬಂದಿದ್ದಾಳೆ.

ಆಂಧ್ರಪ್ರದೇಶದ ಚಂದನ ಹಾಗೂ ಅಮೆರಿಕಾದ ಜಾಕ್ವೆಲಿನ್ ಇನಸ್ಟಾಗ್ರಾಂನಲ್ಲಿ ಪರಿಚಿತರಾದ ನಂತರ ಮಾತು ಮುಂದುವರೆದು ಇಬ್ಬರ ನಡುವೆ ಸಲುಗೆ ಬೆಳೆದಿದೆ. ಚಂದನ ಸರಳತೆಗೆ ಆಕರ್ಷಿತಳಾದ ಜಾಕ್ವೆಲಿನ್ ಈಗ ಪ್ರೇಮನಿವೇದನೆ ಮಾಡಿಕೊಂಡಿದ್ದಾಳೆ. ಇನ್‌ಸ್ವಾದಲ್ಲಿ ಒಂದು ‘ಹಾಯ್ ‘ ಮೂಲಕ ಪರಿಚಯವಾದವರು 14 ತಿಂಗಳು ಚಾಟ್ ಮಾಡಿದ ನಂತರ ಪ್ರೀತಿಯಲ್ಲಿ ಬಿದ್ದು ಈಗ ಮದುವೆಯಾಗಲು ನಿರ್ಧರಿಸಿದ್ದಾರೆ.

“ಸಂಗೀತ, ಕಲೆ ಮತ್ತು ಛಾಯಾಗ್ರಹಣದಲ್ಲಿ ಚಂದನ ಇದ್ದ ಉತ್ಸಾಹಕ್ಕೆ ನಾನು ಆಕರ್ಷಿತಳಾದೆ. 8 ತಿಂಗಳ ಕಾಲ ಆನಲೈನನಲ್ಲಿ ಡೇಟಿಂಗ್ ಮಾಡಿದೆವು. ನನ್ನ ತಾಯಿಯ ಅನುಮತಿ ಪಡೆದು ನಾನು ಭಾರತಕ್ಕೆ ಬಂದಿದ್ದೇನೆ” ಎಂದು ಜಾಕ್ವೆಲಿನ್ ಹೇಳಿದ್ದಾಳೆ.

ಈ ಜೋಡಿ ಈಗ ಅಮೆರಿಕದಲ್ಲಿ ತಮ್ಮ ಜೀವನವನ್ನು ಒಟ್ಟಿಗೆ ಪ್ರಾರಂಭಿಸಲು ಚಂದನಗೆ ವೀಸಾಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದು ನಮ್ಮ ಜೀವನದ ಹೊಸ ಅಧ್ಯಾಯಕ್ಕಾಗಿ ನಾವಿಬ್ಬರೂ ಉತ್ಸುಕರಾಗಿದ್ದೇವೆಂದು ಅವರು ಹೇಳಿದ್ದಾರೆ.

Share This Article