ಹಾಲ್ ಟಿಕೆಟ್ ನಲ್ಲಿ ನಟಿ ಐಶ್ವರ್ಯಾ ರೈ ಭಾವಚಿತ್ರ 

khushihost
ಹಾಲ್ ಟಿಕೆಟ್ ನಲ್ಲಿ ನಟಿ ಐಶ್ವರ್ಯಾ ರೈ ಭಾವಚಿತ್ರ 

ರಾಂಚಿ, ೧೧- ಜಾರ್ಖಂಡ ರಾಜ್ಯದಲ್ಲಿ ವಿಶ್ವವಿದ್ಯಾಲಯದ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿ ಹಾಲ್​ ಟಿಕೆಟ್​ನಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಚಿತ್ರದ ಫೋಟೋ ಲಗತ್ತಿಸಲಾಗಿದೆ. ಇದನ್ನು ಕಂಡು ವಿದ್ಯಾರ್ಥಿನಿಯೇ ಚಕಿತರಾಗಿದ್ದಾರೆ.

ಜಾರ್ಖಂಡ್​ನ ಬಿನೋದ ಬಿಹಾರಿ ಮಹ್ತೊ ಕೊಯಲಾಂಚಲ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಮುಂದಿನ ವಾರ ನಡೆಯುವ ಪರೀಕ್ಷೆಗಾಗಿ ಆನ್​ಲೈನ್​ನಲ್ಲಿ ಹಾಲ್​ ಟಿಕೆಟ್​ ಪಡೆದಿದ್ದಾರೆ.

ತಮ್ಮ ಚಿತ್ರದ ಜಾಗದಲ್ಲಿ ಐಶ್ವರ್ಯಾ ರೈ ಫೋಟೋ ಕಂಡು ವಿದ್ಯಾರ್ಥಿನಿ ಶಾಕ್ ಆಗಿದ್ದಾರೆ. ಈ ಬಗ್ಗೆ ಕುಲಪತಿಗಳಿಗೆ ದೂರು ನೀಡಿದ್ದಾರೆ.

ವಿದ್ಯಾರ್ಥಿನಿ ನೀಡಿದ ಮಾಹಿತಿಯ ಮೇಲೆ ಹಾಲ್​ ಟಿಕೆಟ್​ ಸಿದ್ಧಪಡಿಸಲಾಗಿರುತ್ತದೆ. ಐಶ್ವರ್ಯಾ ರೈ ಅವರ ಚಿತ್ರ ಬರುವಂತೆ ಮಾಡಿದ್ದು, ವಿವಿಯ ಹೆಸರು ಕೆಡಿಸಲು ಯಾರೋ ಸಂಚು ರೂಪಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕುಲಪತಿ ತಿಳಿಸಿದ್ದಾರೆ.

ಇನ್ನು, ವಿದ್ಯಾರ್ಥಿನಿ ಹಾಲ್​ ಟಿಕೆಟ್​ನಲ್ಲಿ ಚಿತ್ರ ತಪ್ಪಾಗಿ ಮುದ್ರಿತವಾಗಿದ್ದು, ತಾವು ಪರೀಕ್ಷೆಯಿಂದ ಹೊರಬೀಳುವ ಆತಂಕದಲ್ಲಿದ್ದಾರೆ. ಆದರೆ, ವಿದ್ಯಾರ್ಥಿನಿಗೆ ತೊಂದರೆಯಾಗದಂತೆ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದು ವಿವಿ ಸಿಬ್ಬಂದಿ ತಿಳಿಸಿದ್ದಾರೆ.

Share This Article