ಪ್ರೇಯಸಿಯ ಕೊಂದು ಫ್ರಿಡ್ಜ್ ನಲ್ಲಿಟ್ಟ ಬಳಿಕವೂ ಹಲವರೊಂದಿಗೆ ಡೇಟಿಂಗ್ ಮುಂದುವರೆಸಿದ್ದ ಅಫ್ತಾಬ

khushihost
ಪ್ರೇಯಸಿಯ ಕೊಂದು ಫ್ರಿಡ್ಜ್ ನಲ್ಲಿಟ್ಟ ಬಳಿಕವೂ ಹಲವರೊಂದಿಗೆ ಡೇಟಿಂಗ್ ಮುಂದುವರೆಸಿದ್ದ ಅಫ್ತಾಬ

ಹೊಸದಿಲ್ಲಿ, ೧೫- ದೇಶವನ್ನೇ ನಡುಗಿಸಿರುವ ದೆಹಲಿಯ ಯುವತಿ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಅಂಶಗಳು ಒಂದೊಂದಾಗಿ ಬಯಲಾಗ. ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಶ್ರದ್ಧಾಳ ಹತ್ಯೆ ಬಳಿಕ ಆರೋಪಿ ಆಫ್ತಾಬ ಅಮೀನ ಪೂನಾವಾಲಾ ಹಲವು ಯುವತಿಯರೊಂದಿಗೆ ಡೇಟಿಂಗ್ ಮಾಡ್ತಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಶ್ರದ್ಧಾಳನ್ನು ಹತ್ಯೆ ಮಾಡಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟ ಬಳಿಕವೂ ಆತನ ಮನೆಗೆ ಹಲವು ಯುವತಿಯರು ಭೇಟಿ ನೀಡಿದ್ದ ಬಗ್ಗೆ ಗೊತ್ತಾಗಿದೆ.

ಡೇಟಿಂಗ್ ಆಪ್ ಮೂಲಕ ಮತ್ತಷ್ಟು ಯುವತಿಯರ ಜೊತೆ ಡೇಟಿಂಗ್ ಮುಂದುವರೆಸಿದ್ದ ಆರೋಪಿ ಅವರನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಮನೆಗೆ ಬಂದ ಯುವತಿಯರಿಗೆ ಅಫ್ತಾಬ್ ನ ಕ್ರೂರತೆ ಬಗ್ಗೆ ಗೊತ್ತೇ ಇರಲಿಲ್ಲ. ಫ್ರಿಡ್ಜ್ ನಲ್ಲಿ ಆತ ಯುವತಿಯ ದೇಹದ ತುಂಡುಗಳನ್ನು ಇಟ್ಟಿದ್ದರ ಬಗ್ಗೆ ಅವರ ಅರಿವಿಗೇ ಬಂದಿರಲಿಲ್ಲ. ಯುವತಿಯರಷ್ಟೇ ಅಲ್ಲದೇ ಫುಡ್ ಡೆಲಿವರಿ ಬಾಯ್ಸ್, ಆತನ ಸ್ನೇಹಿತರು ಸೇರಿದಂತೆ ಹಲವರು ಅಫ್ತಾಬ ಮನೆಗೆ ಭೇಟಿ ನೀಡಿದ್ದಾರೆ.

ಮನೆಯಲ್ಲಿ ಹಲವಾರು ಅಗರಬತ್ತಿಗಳನ್ನು ಹೊತ್ತಿಸಿರುವುದು, ರೂಮ್ ಫ್ರೆಶ‌ನರ್‌ಗಳ ಘೋರ ವಾಸನೆ ಮತ್ತು ಬ್ಲೀಚ್‌ನ ತೀಕ್ಷ್ಣವಾದ ದುರ್ವಾಸನೆಯನ್ನು ಅವರು ಗಮನಿಸಿದರೂ, ಇದು ಬಹುಶಃ ಕೊಲೆ ಮುಚ್ಚಿಡಲು ಮಾಡಿರುವ ತಂತ್ರಗಳೆಂದು ಮನೆಗೆ ಬಂದಿದ್ದವರಿಗೆ ಗೊತ್ತಾಗಿಲ್ಲ ಎಂದು ಶ್ರದ್ಧಾ ಹತ್ಯೆಯ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಪೋಲೀಸರ ಪ್ರಕಾರ ಯುವತಿಯನ್ನು ಮೇ ತಿಂಗಳಲ್ಲಿ ಅಫ್ತಾಬ್ ಕೊಲೆ ಮಾಡಿದ್ದಾನೆ. ಕುಟುಂಬವನ್ನು ವಿರೋಧಿಸಿ ಅವರು ಮಹಾರಾಷ್ಟ್ರದಿಂದ ದೆಹಲಿಗೆ ಬಂದು ಲಿವ್-ಇನ್ ಸಂಬಂಧದಲ್ಲಿ ಉಳಿದಿದ್ದರು. ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆಯಲ್ಲಿ ಆರೋಪಿ ಆಗಾಗ್ಗೆ ಜಗಳವಾಡುತ್ತಿದ್ದರಿಂದ ತಾನು ಅವಳನ್ನು ಕೊಂದಿದ್ದೇನೆ ಮತ್ತು ಆಕೆ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು ಎಂದಿದ್ದಾನೆ .

Share This Article