ಮಹಾರಾಷ್ಟ್ರ ನಂತರ ಈಗ ತಮಿಳುನಾಡಿನಲ್ಲಿಯೂ ಕನ್ನಡಿಗರ ವಾಹನದ ಮೇಲೆ ಕಲ್ಲು ತೂರಾಟ

khushihost
ಮಹಾರಾಷ್ಟ್ರ ನಂತರ ಈಗ ತಮಿಳುನಾಡಿನಲ್ಲಿಯೂ ಕನ್ನಡಿಗರ ವಾಹನದ ಮೇಲೆ ಕಲ್ಲು ತೂರಾಟ

ಚೆನ್ನೈ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿರುವ ಘಟನೆಗಳ ಬೆನ್ನಲ್ಲೇ ಇದೀಗ ತಮಿಳುನಾಡಿನಲ್ಲಿಯೂ ಕನ್ನಡಿಗರ ವಾಹನದ ಮೇಲೆ ದಾಳಿ ನಡೆಸಲಾಗಿದೆ.

ತಮಿಳುನಾಡಿನಲ್ಲಿ ಕರ್ನಾಟಕದ ಟಿಟಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಶಬರಿಮಲೆ ಪ್ರವಾಸಕ್ಕೆ ತೆರಳಿ ವಾಪಸ್ ಆಗುತ್ತಿದ್ದ ಕರ್ನಾಟಕದ ವಾಹನದ ಮೇಲೆ ಕಿಡಿಗೇಡಿಗಳು ಮಧುರೈನಲ್ಲಿ ಕಲ್ಲುತೂರಾಟ ನಡೆಸಿದ್ದಾರೆ.

ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆ ಪ್ರವಾಸ ಮುಗಿಸಿ ಮಧುರೈ ದೇವಾಲಯಕ್ಕೆ ತೆರಳಿದ್ದರು. ಈ ವೇಳೆ ಟಿಟಿ ವಾಹನದ ಮೇಲೆ ಕನ್ನಡ ಧ್ವಜ ಕಟ್ಟಿದ್ದಕ್ಕೆ ಕಿಡಿಗೇಡಿಗಳು ತೊಂದರೆ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ತಮಿಳುನಾಡು ಕಿಡಿಗೇಡಿಗಳ ದಾಳಿಯಿಂದ ನಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

Share This Article