ಏರಟೆಲ್ 5ಜಿ : ಒಂದೇ ತಿಂಗಳಲ್ಲಿ 10 ಲಕ್ಷ ಗ್ರಾಹಕರು

khushihost
ಏರಟೆಲ್ 5ಜಿ : ಒಂದೇ ತಿಂಗಳಲ್ಲಿ 10 ಲಕ್ಷ ಗ್ರಾಹಕರು

ಹೊಸದಿಲ್ಲಿ: 5ಜಿ ಸೇವೆಗೆ ಅಕ್ಟೋಬರ 1ರಂದು ಚಾಲನೆ ನೀಡಿದ್ದ ಬೆನ್ನಲ್ಲೇ ಏರ್​ಟೆಲ್​ ದಾಖಲೆ ಬರೆದಿದೆ. ಆರಂಭದ 30 ದಿನಗಳಲ್ಲೇ 10 ಲಕ್ಷ 5ಜಿ ಗ್ರಾಹಕರನ್ನು ತಾನು ಹೊಂದಿರುವುದಾಗಿ ದೂರಸಂಪರ್ಕ ಕಂಪನಿ ಭಾರತಿ ಏರ್ಟೆಲ್ ತಿಳಿಸಿದೆ.

ಸದ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಏರ್​ಟೆಲ್ 5ಜಿ ಸೇವೆ ಆರಂಭವಾಗಿಲ್ಲ. ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುವುದಾಗಿ ಕಂಪನಿ ತಿಳಿಸಿತ್ತು. ಇದೀಗ ಸೇವೆ ವಿಸ್ತರಿಸುವ ಹಂತದಲ್ಲಿರುವಾಗಲೇ ಭಾರಿ ಸಂಖ್ಯೆಯ ಗ್ರಾಹಕರು ದೊರೆತಿದ್ದಾರೆ ಎಂದು ಹೇಳಿಕೆ ನೀಡಿದೆ.

ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಿದೆ. ಮುಂಬೈ, ಚೆನ್ನೈ, ಹೈದರಾಬಾದ, ನಾಗಪುರ ಹಾಗೂ ವಾರಣಾಸಿಗಳಲ್ಲಿ ಹಂತಹಂತವಾಗಿ 5ಜಿ ಸೇವೆ ಆರಂಭಿಸುವುದಾಗಿ ಏರ್​​ಟೆಲ್ ಹೇಳಿತ್ತು.

ಈ ನಗರಗಳಲ್ಲಿ ಸೇವೆಯನ್ನು ವಿಸ್ತರಿಸುವ ಕೆಲಸ ನಡೆಯುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ. ನೆಟವರ್ಕ​ ವಿಸ್ತರಣೆ ಕಾರ್ಯ ಪೂರ್ತಿ ನಡೆಯುವುದಕ್ಕೂ ಮುನ್ನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಏರಟೆಲ್ ಹೇಳಿದೆ.

Share This Article