ಶಿಕ್ಷಕಿ ಪಾಠ ಮಾಡುತ್ತಿರುವಾಗ ವಿದ್ಯಾರ್ಥಿಗಳಿಂದ ಅಶ್ಲೀಲ ವರ್ತನೆ; ಎಫ್​ಐಆರ್​ ದಾಖಲು

khushihost
ಶಿಕ್ಷಕಿ ಪಾಠ ಮಾಡುತ್ತಿರುವಾಗ ವಿದ್ಯಾರ್ಥಿಗಳಿಂದ ಅಶ್ಲೀಲ ವರ್ತನೆ; ಎಫ್​ಐಆರ್​ ದಾಖಲು

ಮೀರತ್: ಗುರುವನ್ನು ದೇವರೆಂದು ಪರಿಗಣಿಸುವ ನಮ್ಮ ದೇಶದಲ್ಲಿ ಎಂಥೆಂಥ ಅಪ್ರಿಯ ಘಟನೆಗಳು ವರದಿಯಾಗುತ್ತಿವೆ. ಶಿಕ್ಷಕಿಯ ಜೊತೆಯೇ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ. ತಮಗೆ ಪಾಠ ಮಾಡಿದ ಶಿಕ್ಷಕಿಯ ಜೊತೆಯೇ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದಾರೆ.

ಮೀರತ್‌ನ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಮ್ ಮನೋಹರ್ ಲೋಹಿಯಾ ಇಂಟರ್ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿದೆ. 12ನೇ ತರಗತಿಯಲ್ಲಿ ಓದುತ್ತಿರುವ ಅಮನ್, ಕೈಫ್ ಹಾಗೂ ಅಮಲ್ತಾಸ್ ಎಂಬ ವಿದ್ಯಾರ್ಥಿಗಳು ಇಂಥದ್ದೊಂದು ಕುಕೃತ್ಯ ಎಸಗಿದ್ದಾರೆ. ಶಿಕ್ಷಕಿಗೆ ಅಸಭ್ಯವಾಗಿ ಕಾಮೆಂಟ್‌ಗಳನ್ನು ಮಾಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಆ ದೃಶ್ಯದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಇಷ್ಟೇ ಅಲ್ಲದೇ, ಪಾಠ ಮಾಡುತ್ತಿರುವಾಗಲೇ ಐ ಲವ್​ ಯೂ ಮೇರಿ ಜಾನಮ್​ ಎಂದು ಹೇಳಿ ಶಿಕ್ಷಕಿಗೆ ಕಿರುಕುಳ ನೀಡಿದ್ದಾರೆ. ಬಾಯಲ್ಲಿ ಲಾಲಿಪಾಪ್​ ಇಟ್ಟುಕೊಂಡು ಅಶ್ಲೀಲವಾಗಿ ವರ್ತಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಶಿಕ್ಷಕಿ ಕೂಡ ಮುಸ್ಲಿಂ ಆಗಿದ್ದು, ವಿದ್ಯಾರ್ಥಿಗಳ ಕಾಟದಿಂದಾಗಿ ಹಿಜಾಬ್​ ಧರಿಸಿ ಬರುತ್ತಿದ್ದರು ಎನ್ನಲಾಗಿದೆ. ಆದರೆ ಈ ವಿದ್ಯಾರ್ಥಿಗಳು ಅಸಭ್ಯವಾಗಿ ನಡೆದುಕೊಂಡಿದ್ದಾರೆ.

Share This Article