ಹೆಗಲ ಮೇಲೆ ಮಗಳು, ಮಗಳ ಮೇಲೊಂದು ಕೊಡೆ: ಅಮ್ಮನ ಪ್ರೀತಿಗಿಂತ ದೊಡ್ಡದೇನಿದೆ?

khushihost
ಹೆಗಲ ಮೇಲೆ ಮಗಳು, ಮಗಳ ಮೇಲೊಂದು ಕೊಡೆ: ಅಮ್ಮನ ಪ್ರೀತಿಗಿಂತ ದೊಡ್ಡದೇನಿದೆ?

ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಲಾಗುತ್ತದೆ. ತನಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಎಳ್ಳಷ್ಟು ಕಷ್ಟವಾಗಲು ತಾಯಿ ಬಿಡಳು. ಅಂಥದ್ದೇ ಒಂದು ಹೃದಯ ಮೆಚ್ಚುವ ವಿಡಿಯೋ ವೈರಲ್​ ಆಗಿದ್ದು, ಈ ವಿಡಿಯೋ ನೋಡಿ ಎಲ್ಲರೂ ಭಾವುಕರಾಗುವಂತಾಗಿದೆ.

ಮಳೆಯಲ್ಲಿ ಮಹಿಳೆಯೊಬ್ಬರು ತನ್ನ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಹೃದಯಸ್ಪರ್ಶಿ ವಿಡಿಯೋ ಇದಾಗಿದೆ. ಇದು ಹೊಸ ವಿಷಯವಲ್ಲದಿದ್ದರೂ ಹೆಗಲ ಮೇಲೆ ಮಗಳನ್ನು ಕುಳ್ಳರಿಸಿಕೊಂಡಿರುವ ಅಮ್ಮ, ಆಕೆ ಒದ್ದೆಯಾಗದಂತೆ ಕೊಡೆ ಹಿಡಿದಿರುವುದು ಎಲ್ಲರ ಮನ ಗೆದ್ದಿದೆ.

ಈ ಅದ್ಭುತ ವಿಡಿಯೋವನ್ನು Zindagi Gulzar Hai ಎಂಬ ಪುಟವು ಹಂಚಿಕೊಂಡಿದೆ, ಈ ವಿಡಿಯೋ ಇದಾಗಲೇ 37 ಸಾವಿರ ವೀಕ್ಷಣೆಗಳನ್ನು ಹೊಂದಿದೆ. 18 ಸೆಕೆಂಡ್‌ಗಳ ವಿಡಿಯೋ ಇದಾಗಿದೆ. ಮಗಳು ಮಳೆಯಲ್ಲಿ ನೆನೆಯಬಾರದೆಂದು ಒಂದು ಕೈಯಲ್ಲಿ ಕೊಡೆಯನ್ನೂ ಹಿಡಿದಿರುವುದು ಅದ್ಭುತ, ತಾಯಿಯ ಪ್ರೀತಿ ಎಂದರೆ ಇದೆ ಅಲ್ಲವೆ ಎಂದು ಹಲವರು ಕಮೆಂಟ್​ನಲ್ಲಿ ಹೇಳಿದ್ದಾರೆ.

https://twitter.com/Gulzar_sahab/status/1596514614593744897?ref_src=twsrc%5Etfw%7Ctwcamp%5Etweetembed%7Ctwterm%5E1596514614593744897%7Ctwgr%5Ef63795c91b20141cb30f97d30871d82d40ff207c%7Ctwcon%5Es1_c10&ref_url=https%3A%2F%2Fkannadadunia.com%2Flive-news%2Fheartwarming-video-of-mother-carrying-daughter-on-her-shoulders-in-the-rain-goes-viral-internet-loves-it%2F

Share This Article