ವಿಜಯಪುರದಲ್ಲಿ ಮತ್ತೆ ಸರಣಿ ಭೂಕಂಪನ  

khushihost
ವಿಜಯಪುರದಲ್ಲಿ ಮತ್ತೆ ಸರಣಿ ಭೂಕಂಪನ  

ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಭೂಕಂಪ ಅನುಭವ ಮುಂದುವರೆದಿದ್ದು, ನಿನ್ನೆ ರಾತ್ರಿ 8.51 ಸುಮಾರಿಗೆ ಮತ್ತು ಮಧ್ಯರಾತ್ರಿ 2.18ಕ್ಕೆ ಭೂಮಿ ಕಂಪಿಸಿದ್ದು, 3.9 ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ.

ವಿಜಯಪುರ ತಾಲೂಕಿನ ಹೊನ್ನುಟಗಿ ಹಾಗೂ ಸುತ್ತಮುತ್ತಲೂ ಭೂಂಕಪನ ದೃಢವಾಗಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಅಧಿಕೃತ ಮಾಹಿತಿ ನೀಡಿದೆ.

ನಿನ್ನೆ ಸಾಯಂಕಾಲ ಹಾಗೂ ರಾತ್ರಿ ಭೂಮಿ‌ ಕಂಪಸಿದ್ದು ರಿಕ್ಟರ್ ಮಾಪನದಲ್ಲಿ ‌ದಾಖಲಾಗಿದೆ. ಬಳಿಕ ಆಗಷ್ಟ 26 ರ ನಸುಕಿನ ಜಾವ 2-21ಕ್ಕೆ ಕಂಪಿಸ ಭೂಮಿ‌ ಕಂಪಿಸಿದ ಅನುಭವವಾಗಿದೆ.

ವಿಜಯಪುರ ನಗರ, ಬಸವನ ಬಾಗೇವಾಡಿ, ಸಿಂದಗಿ, ಇಂಡಿ, ನೆರೆಯ ಜಮಖಂಡಿ ಹಾಗೂ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ಕಂಪನದ ಅನುಭವ ಉಂಟಾಗಿದೆ. ಇಷ್ಟೇ ಅಲ್ಲದೆ ಇಂದು ಮುಂಜಾನೆ 6.58ಕ್ಕೆ ಮತ್ತೇ ಭೂಕಂಪನದ ಅನುಭವವಾಗಿದೆ.

Share This Article