ನಾಡಧ್ವಜಕ್ಕೆ ಬೆಂಕಿ ಹಚ್ಚಿದ್ದ ವಾರಣಾಸಿ ಇಂಜಿನೀಯರನ ಬಂಧನ, ಬಿಡುಗಡೆ

khushihost
ನಾಡಧ್ವಜಕ್ಕೆ ಬೆಂಕಿ ಹಚ್ಚಿದ್ದ ವಾರಣಾಸಿ ಇಂಜಿನೀಯರನ ಬಂಧನ, ಬಿಡುಗಡೆ

ಬೆಂಗಳೂರು, ೬- ಖಾಸಗಿ ಸಂಸ್ಥೆಯೊಂದರ 30 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಭಾನುವಾರ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಕರ್ನಾಟಕ ಧ್ವಜವನ್ನು ಸುಟ್ಟು ಹಾಕಿದ್ದಾನೆ.

ಪೊಲೀಸರು ವಾರಣಾಸಿ ಮೂಲದ ಅಮೃತೇಶ ತಿವಾರಿ ಎಂಬಾತನನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ದೆಹಲಿಯ ಐಐಟಿಯಲ್ಲಿ ಓದಿರುವ ತಿವಾರಿ ಕಳೆದ ಎರಡು ತಿಂಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಂಗಿಪಾಳ್ಯದ 24ನೇ ಮೇನ್‌ನ 22ನೇ ಕ್ರಾಸ್‌ನಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರು ಕರ್ನಾಟಕ ಧ್ವಜಕ್ಕೆ ಬೆಂಕಿ ಹಚ್ಚಿದ ಬಗ್ಗೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತ ನವೀನ್ ನರಸಿಂಹ ಎಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ವೇಳೆ ಕಾರ್ಯಕರ್ತ ಆರೋಪಿಯಿಂದ ಧ್ವಜವನ್ನು ಕಸಿದುಕೊಂಡು ಬೆಂಕಿಯನ್ನು ನಂದಿಸಿದರು.

Share This Article