ಬೆಂಗಳೂರಿನ ಇತಿಹಾಸದಲ್ಲೇ ಅತ್ಯಧಿಕ ಮಳೆ ದಾಖಲು!

khushihost
ಬೆಂಗಳೂರಿನ ಇತಿಹಾಸದಲ್ಲೇ ಅತ್ಯಧಿಕ ಮಳೆ ದಾಖಲು!

ಬೆಂಗಳೂರು, ೧೭- ಮಳೆಯ ಕುರಿತ ಬೆಂಗಳೂರಿನ ಸುಮಾರು 130 ವರ್ಷಗಳ ದಾಖಲೆಯಿದ್ದು, ಆದರೆ 2022 ರಲ್ಲಿ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮಳೆಯಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಈ ಹಿಂದೆ ಕೆಲವೊಂದು ಬಡಾವಣೆಗಳಲ್ಲಿ ಮೊದಲ ಅಂತಸ್ತಿನವರೆಗೂ ಮಳೆ ನಿಂತಿದ್ದು ಕಂಡುಬಂದಿತ್ತು. ರವಿವಾರ ಸಹ ನಗರದಾದ್ಯಂತ ಮಳೆಯಾಗಿದೆ.

2017ರಲ್ಲಿ 170 ಸೆಂ.ಮೀ. ಮಳೆಯಾಗಿದ್ದು ಒಂದು ದಾಖಲೆಯಾಗಿತ್ತು. ಭಾನುವಾರದ ಹೊತ್ತಿಗೆ ಬೆಂಗಳೂರಿನಲ್ಲಿ ಒಟ್ಟು 170.34 ಸೆಂಟಿಮೀಟರ್ ಗಿಂತ ಅಧಿಕ ಮಳೆಯಾಗಿದ್ದು, ಹೊಸ ದಾಖಲೆ ಸೃಷ್ಟಿಸಿದೆ.

Share This Article