ಬಾರ್, ರೆಸ್ಟೋರೆಂಟ, ಪಬ್ ಬೆಳಗಿನ ಜಾವ 3.30ರ ವರೆಗೆ ಓಪನ್

khushihost
ಬಾರ್, ರೆಸ್ಟೋರೆಂಟ, ಪಬ್ ಬೆಳಗಿನ ಜಾವ 3.30ರ ವರೆಗೆ ಓಪನ್

ಬೆಂಗಳೂರು: ಬೆಂಗಳೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ಪಬ್‌ ಗಳ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಫಿಫಾ ವಿಶ್ವಕಪ್ ಸೆಮಿಫೈನಲ್ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಡಿಸೆಂಬರ್ 14, 15 ರಂದು ಬೆಳಗಿನ ಜಾವ 3:30ರ ವರೆಗೂ ಬಾರ್ ಮತ್ತು ಪಬ್ ತೆರೆಯಲು ಅವಕಾಶ ನೀಡಲಾಗಿದೆ. ಇದುವರೆಗೆ ರಾತ್ರಿ 1 ಗಂಟೆಯವರೆಗೆ ಬಾರ್ ಮತ್ತು ಪಬ್ ತೆರೆಯಲು ಅವಕಾಶ ನೀಡಲಾಗಿತ್ತು.

ಫಿಫಾ ವಿಶ್ವಕಪ್ ಸೆಮಿಫೈನಲ್ ಹಿನ್ನೆಲೆ ಸಮಯ ವಿಸ್ತರಣೆಗೆ ಮನವಿ ಮಾಡಲಾಗಿತ್ತು. ಫೆಡರೇಶನ್ ಆಫ್ ಕ್ಲಬ್ಸ್ ಕರ್ನಾಟಕ ವತಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಬೆಳಗಿನ ಜಾವ 3.30 ರವರೆಗೆ ವಿಸ್ತರಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ ರೆಡ್ಡಿ ಆದೇಶ ಹೊರಡಿಸಿದ್ದಾರೆ.

Share This Article