ಯುವಕನ ಬರ್ಬರ ಹತ್ಯೆ

khushihost
ಯುವಕನ ಬರ್ಬರ ಹತ್ಯೆ

ಬೆಳಗಾವಿ : ವೈಯಕ್ತಿಕ ದ್ವೇಷದ ಕಾರಣ 23 ವರುಷದ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಮಾರಿಹಾಳ ಗ್ರಾಮದ ಮಹಾಂತೇಶ ರುದ್ರಪ್ಪ ಕರಲಿಂಗನವರ ಎಂಬವರನ್ನು 4-5 ಹಂತಕರ ಗುಂಪು ಚಾಕು ಮುಂತಾದ ಆಯುಧಗಳಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಹಳೆಯ ದ್ವೇಷವೇ ಕಾರಣವೆನ್ನಲಾಗಿದೆ.

ಸ್ಥಳಕ್ಕೆ ಅಪರಾಧ ವಿಭಾಗದ ಡಿಸಿಪಿ ಪಿ.ವಿ. ಸ್ನೇಹ ಹಾಗೂ ಮಾರಿಹಾಳ ಇನ್ಸಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article