ಬೆಳಗಾವಿ : 30 ವರ್ಷಗಳ ನಂತರ ಮೂವರು ಆರೋಪಿಗಳ ಬಂಧನ

khushihost
ಬೆಳಗಾವಿ : 30 ವರ್ಷಗಳ ನಂತರ ಮೂವರು ಆರೋಪಿಗಳ ಬಂಧನ

ಬೆಳಗಾವಿ: ಮೂರು ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು 30 ವರ್ಷಗಳ ನಂತರ ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಶಿವಕಾಶಿಯ ರವಿ ನಾಡರ್, ಮಹೀಂದ್ರನ್ ನಾಡರ್, ಪಾಂಡಿ ನಾಡ‌ರ್ ಬಂಧಿತರು. 1994-95ರಲ್ಲಿ ದಾಖಲಾಗಿದ್ದ ಮೂರು ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ತಮಿಳುನಾಡಿಗೆ ನಮ್ಮ ತಂಡದವರು ಹೋಗಿ ಅವರನ್ನು ಪತ್ತೆ ಹಚ್ಚಿದ್ದಾರೆ ಎಂದು ಕ್ಯಾಂಪ್ ಠಾಣೆ ಇನ್ ಸ್ಪೆಕ್ಟರ್ ಆನಂದ್‌ ಒನಕುದ್ರೆ ತಿಳಿಸಿದರು.

Share This Article