ಅಮೆರಿಕ ಜನಪ್ರತಿನಿಧಿ ಸಭೆಯ ಚುನಾವಣೆಗೆ ಬೆಳಗಾವಿ ಮೂಲದ ಉದ್ಯಮಿ ಸ್ಪರ್ಧೆ 

khushihost
ಅಮೆರಿಕ ಜನಪ್ರತಿನಿಧಿ ಸಭೆಯ ಚುನಾವಣೆಗೆ ಬೆಳಗಾವಿ ಮೂಲದ ಉದ್ಯಮಿ ಸ್ಪರ್ಧೆ 

ವಾಷಿಂಗ್ಟನ್‌: ಸಂಸತ್ತಿನ ಕೆಳಮನೆ ಜನಪ್ರತಿನಿಧಿ ಸಭೆಗೆ ನಡೆಯುತ್ತಿರುವ ಮಧ್ಯಂತರ ಚುನಾವಣೆಯಲ್ಲಿ ಬೆಳಗಾವಿ ಮೂಲದ ಉದ್ಯಮಿ ಥಾಣೇದಾರ‌ ಸೇರಿದಂತೆ ಐವರು ಭಾರತೀಯರು ರೇಸ್‌ನಲ್ಲಿದ್ದಾರೆ. ಅಲ್ಲದೇ ಭಾರತೀಯರೇ ಗೆಲ್ಲುವ ಸಾಧಿಸಲಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಮೂಲದವರಾದ ಥಾಣೆದಾರ‌ ಉದ್ಯಮಿಯಾಗಿದ್ದು, ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಧ್ಯಂತರ ಚುನಾವಣೆಯಲ್ಲಿ ಇವರು ಕ್ಯಾಲಿಫೋರ್ನಿಯಾದ 7ನೇ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ.

ಇವರಲ್ಲದೇ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ , ರೋ ಖನ್ನಾ ಮತ್ತು ಪ್ರಮಿಳಾ ಜೈಪಾಲ್‌ ಸಹ ವಿವಿಧ ಕ್ಷೇತ್ರಗಳಿಂದ ಚುನಾವಣಾ ರೇಸ್‌ನಲ್ಲಿದ್ದಾರೆ. ಇವರಲ್ಲಿ ಬೇರಾ ಅತ್ಯಂತ ಹಿರಿಯರಾಗಿದ್ದು, ಈವರೆಗೆ 6 ಬಾರಿ ಗೆಲುವು ಸಾಧಿಸಿದ್ದಾರೆ.

Share This Article