ಬೆಳಗಾವಿ ಜಿಲ್ಲೆ ಕಾಂಗ್ರೆಸ್‌ -11, ಬಿಜೆಪಿ-7; ರಾಜು ಸೇಠ, ಜೊಲ್ಲೆಗೆ ಗೆಲುವು

khushihost
ಬೆಳಗಾವಿ ಜಿಲ್ಲೆ ಕಾಂಗ್ರೆಸ್‌ -11, ಬಿಜೆಪಿ-7; ರಾಜು ಸೇಠ, ಜೊಲ್ಲೆಗೆ ಗೆಲುವು

ಬೆಳಗಾವಿ, ೧೩- ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್‌ 11  ಮತ್ತು ಬಿಜೆಪಿ 7 ಸ್ಥಾನ ಗಳಿಸಿದೆ.

ಗೋಕಾಕ, ನಿಪ್ಪಾಣಿ, ಬೆಳಗಾವಿ ದಕ್ಷಿಣ, ಅರಭಾವಿ, ಖಾನಾಪುರ ಮತ್ತು ರಾಯಬಾಗ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು ಜಿಲ್ಲೆಯ ಉಳಿದ  12 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ.

ಬೈಲಹೊಣಗಲದಿಂದ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕೌಜಲಗಿ, ಬೆಳಗಾವಿ ಉತ್ತರದಿಂದ ಕಾಂಗ್ರೆಸ್‌ ನ ರಾಜು ಸೇಠ  ಮತ್ತು ನಿಪ್ಪಾಣಿಯಿಂದ ಬಿಜೆಪಿಯ ಶಶಿಕಲಾ ಜೊಲ್ಲೆ ಗೆಲುವು ಸಾಧಿಸಿದ್ದಾರೆ.

Share This Article